ಸದೃಢ ಭಾರತ ಕಟ್ಟಲು ದೇವರ ಅನುಗ್ರಹ ಅಗತ್ಯ: ಕಾಣಿಯೂರು ಶ್ರೀ

IMG-20231014-WA0002
Published on


ಉಡುಪಿ: ಹಿಂದೂ  ಧರ್ಮ ರಕ್ಷಣೆಯನ್ನು ಮಾಡಲು ಪಣ ತೊಟ್ಟಿರುವವರಿಗೆ  ದೇವರ ರಕ್ಷಣೆ ಬೇಕಾಗಿರುವುದರಿಂದ ನಾವೆಲ್ಲರೂ ಧಾರ್ಮಿಕ ಕಾರ್ಯಕ್ರಮ ಮೂಲಕ ಅವರೊಂದಿಗೆ ಕೈಜೋಡಿಸಬೇಕು. ಸದೃಢ ಭಾರತವನ್ನು ಕಟ್ಟಲು ದೇವರ ಪ್ರಾರ್ಥನೆಯೊಂದಿಗೆ ನಮ್ಮ ಪ್ರಯತ್ನವು ಅಗತ್ಯವಾಗಿದೆ ಎಂದು ಕಾಣಿಯೂರು ಮಠಾಧೀಶ  ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.


ಶುಕ್ರವಾರ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ  ಲೋಕಕಲ್ಯಾಣಕ್ಕಾಗಿ  ಸುಮಾರು 150 ಋತ್ವಿಜರಿಂದ 10 ಹೋಮ ಕುಂಡಗಳಲ್ಲಿ ಒಂದು ಲಕ್ಷ ಸಂಖ್ಯೆಯ ಜಾತವೇದಸೀ ತ್ರಿಷ್ಟ್ಟುಪ್ ಮಂತ್ರ ಹೋಮ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಅವರು ಅಶೀರ್ವಚನ ನೀಡಿದರು.

 ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಮಾತನಾಡಿ, ಸನಾತನ  ಹಿಂದೂ  ಧರ್ಮದ ರಕ್ಷಣೆಗಾಗಿ ದೇವರ ಮೊರೆ ಹೋಗಿ ಪ್ರಾರ್ಥಿಸಬೇಕು. ಶತ್ರುಗಳ ಒಳಗಿರುವ ಶತ್ರುತ್ವ ನಾಶ ಆಗಬೇಕು ಎಂದರು.

ವಿದ್ವಾಂಸರಾದ  ಪಾಡಿಗಾರು ಶ್ರೀನಿವಾಸ ತಂತ್ರಿ, ಗೋಪಾಲಕೃಷ್ಣ ಜೋಯಿಸ್, ಪಂಜ ಭಾಸ್ಕರ ಭಟ್, ನಿಟ್ಟೆ ಪ್ರಸನ್ನ ಆಚಾರ್ಯ, ಹೆರ್ಗ ಜಯರಾಮ ತಂತ್ರಿ, ಹೆರ್ಗ ರವೀಂದ್ರ ಭಟ್,ಅರ್ಚಕರಾದ ಗೋಪಾಲಕೃಷ್ಣ್ಣ ಭಟ್, ರಾಘವೇಂದ್ರ ಭಟ್, ಬೆಳ್ಳೆ ಮಧ್ವರಾಜ ಭಟ್, ಪಡುಬಿದ್ರೆ ರಾಜೇಶ ಉಪಾಧ್ಯಾಯ ಮೊದಲಾದವರು ಭಾಗವಹಿಸಿದ್ದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ, ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ  ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ ನಾಯಕ್, ಕುರ್ಕಾಲು ಸುಂದರ ಶೆಟ್ಟಿ , ಮುಖಂಡರಾದ ಗೀತಾಂಜಲಿ ಸುವರ್ಣ, ಸುಮಾ ಶೆಟ್ಟಿ, ವಿಶ್ವನಾಥ ಶೆಟ್ಟಿ ಬೆಳ್ಳೆ, ವಿಶ್ವನಾಥ ಪೂಜಾರಿ, ಬೆಳ್ಳೆ ಪಂಚಾಯತಿನ ಅಧ್ಯೆ  ದಿವ್ಯ ಆಚಾರ್ಯ, ಉಪಾಧ್ಯಕ್ಷ ಶಶಿಧರ ವಾಗ್ಲೆ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net