

ಮಡಿಕೇರಿ: ಮಡಿಕೇರಿಯ ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ನತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನವೆಂಬರ್ ತಿಂಗಳಲ್ಲಿ ಸಂಸ್ಥೆ ಹಮ್ಮಿಕೊಳ್ಳುವ ಪ್ರತಿಭೋತ್ಸವದಲ್ಲಿ ಬಹುಮಾನ ನೀಡಲಾಗುವುದು ಎಂದು ತಿಳಿಸಿದ ಅವರು, ಸ್ಪರ್ಧೆಯಲ್ಲಿ ಕನ್ನಡ ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಬೇಕು. ಕಾಲಾವಕಾಶ ೩ ನಿಮಿಷ, ಸ್ಪರ್ಧೆಗೆ ಯಾವುದೇ ಶುಲ್ಕವಿಲ್ಲ. ನೃತ್ಯದ ವೀಡಿಯೋ ಕಳುಹಿಸಲು ಆ.೨೦ ಕೊನೆಯ ದಿನವಾಗಿದೆ.
ವೀಡಿಯೋ ಕಳುಹಿಸಬೇಕಾದ ೩ ರಿಂದ ೬ ವರ್ಷದ ಮಕ್ಕಳು ಮೊಬೈಲ್ ಸಂಖ್ಯೆ-೬೩೬೩೧೭೯೨೧೪, ೭ ರಿಂದ ೧೨ ವರ್ಷದ ಮಕ್ಕಳು-೯೪೮೦೭೮೩೧೫೬, ೧೩ ರಿಂದ ೧೮ ವರ್ಷದ ಮಕ್ಕಳು-೯೭೪೦೮೭೫೩೮೩ ಸಂಖ್ಯೆಗೆ ಕಳುಹಿಸತಕ್ಕದ್ದು, ಹೆಚ್ಚಿನ ಮಾಹಿತಿಗಾಗಿ ೯೬೬೩೧೧೯೬೭೦ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.