

ಮಡಿಕೇರಿ:
ನಗರದ ನಾಲ್ಕು ಶಕ್ತಿದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಮಾ.27 ಮತ್ತು 28 ರಂದು ದೈವಕೋಲ ಉತ್ಸವ ಜರುಗಲಿದೆ. ಎರಡು ದಿನಗಳ ಕಾಲ ದೇವಾಲಯದಲ್ಲಿ ವಿವಿಧ ವಿಶೇಷ ಪೂಜಾಕೈಂಕರ್ಯಗಳು ನಡೆಯಲಿದ್ದು, ಮಾ.27ರ ರಾತ್ರಿ 7 ಗಂಟೆಯಿAದ ಮಾ.28ರ ಅಪರಾಹ್ನದ ವರೆಗೆ ಶ್ರೀ ವಿಷ್ಣುಮೂರ್ತಿ (ತೀ ಚಾಮುಂಡಿ), ರಕ್ತೇಶ್ವರಿ (ರಕ್ತ ಚಾಮುಂಡಿ), ಕುಟ್ಟಿಶಾಸ್ತಾನ್, ಉಚ್ಚಿಟ್ಟ ವೀರನ್ (ಗುರು) ಗುಳಿಗನ್, ಭೂತಂ (ನಕ್ಕಿಚ್ಚು), ಪಾಷಾಣಮೂರ್ತಿ (ಕಲ್ಲುರ್ಟ್ಟಿ) ಮತ್ತು ಅಜ್ಜಪ್ಪ ತೆರೆಗಳ ದೈವಕೋಲ ನಡೆಯಲಿದೆ.
ಮಾ.27 ರಂದು ರಾತ್ರಿ ಭಕ್ತಾಧಿಗಳಿಗೆ ಅನ್ನದಾನ ಏರ್ಪಡಿಸಲಾಗಿದ್ದು, ಮಾ.28ರ ಬೆಳಗ್ಗೆ 5 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಮೇಲೇರಿ ಮತ್ತು 9 ಗಂಟೆಗೆ ರಕ್ತೇಶ್ವರಿ ದೈವಕೋಲ ಉತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.