

ಕುಂದಗೋಳ: ಶಿಕ್ಷಕರು ಮಕ್ಕಳಿಗೆ ಪಠ್ಯಪುಸ್ತಕದ ಬೋಧನೆಯೊಂದಿಗೆ ನೈತಿಕ ಶಿಕ್ಷಣ ಕಲಿಸಿ, ಬದುಕಿಗೆ ದಾರಿ ತೋರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಪಟ್ಟಣದ ಹರಭಟ್ಟ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡ ನೂತನ ದ್ವಾರ ಬಾಗಿಲ ನಾಮಫಲಕ ಉದ್ಘಾಟನೆ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣ ಸಮಿತಿ ಚೇರ್ಮನ್ ಅರವಿಂದ ಕಟಗಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗಾಗಿ ಅನೇಕ ದಾನಿಗಳು ಕೊಡುಗೆ ನೀಡಿದ್ದಾರೆ. ಸಂಸ್ಥೆಯ ಏಳಿಗೆಯಲ್ಲಿ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿದೆ ಎಂದರು.
ಶಿಕ್ಷಣ ಸಮಿತಿ ಅಧ್ಯಕ್ಷ ಟಿ.ಎಸ್. ಗೌಡಪ್ಪನವರ ಮಾತನಾಡಿ, ಸಂಸ್ಥೆಯಲ್ಲಿರುವ ಶಿಕ್ಷಕರಲ್ಲಿ ಐವರು ಶಿಕ್ಷಕರನ್ನು ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿದ್ದೇವೆ ಎಂದರು.
ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸುರೇಶ ಗಂಗಾಯಿ ಹಾಗೂ ಬಸವರಾಜ ಹರವಿ ಅವರು ತಮ್ಮ ತಂದೆ-ತಾಯಿ ಹೆಸರಿನಲ್ಲಿ ಶಿಕ್ಷಣ ಸಮಿತಿಗೆ ಹೊಸ ಕೊಠಡಿ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು. ಆರ್.ಎಂ. ಪಟ್ಟೆದ, ಆರ್.ಐ. ಬ್ಯಾಹಟ್ಟಿ, ರಾಜು ಶಿವಳ್ಳಿ, ಶೇಖಣ್ಣ ಬಾಳಿಕಾಯಿ, ಶ್ರೀಕಾಂತ ಕಲಾಲ, ಜಿ.ಎಫ್. ಪಾಟೀಲ, ಭರಮಣ್ಣ ಸೊರಟೂರ, ವೀರೇಶ ಗೌಡಪ್ಪನವರ, ಎಸ್.ಜಿ. ಅವಾರಿ, ಎಲ್.ಎಸ್. ಕೊನೇರಿ, ಸಿ.ಎಚ್. ಕುದರಿ, ರಾಜಣ್ಣ ದೇಸಾಯಿ, ದಾನಪ್ಪ ಗಂಗಾಯಿ, ಪ್ರಾಚಾರ್ಯ ಎಲ್.ಎಸ್. ಲಮಾಣಿ, ಇತರರಿದ್ದರು.