ಅಕ್ರಮ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿ ವಶ: ಚಾಲಕ ಪರಾರಿ

Ration
Published on

ಕುಂದಾಪುರ: ತಾಲೂಕಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಅಕ್ಕಿಯನ್ನು ಆಹಾರ ನೀರಿಕ್ಷಕ ಎಚ್.ಎಸ್. ಸುರೇಶ್ ಗುರುವಾರ ವಶಪಡಿಸಿಕೊಂಡಿದ್ದು ಓರ್ವ ಪರಾರಿಯಾಗಿದ್ದಾನೆ.

ಖಚಿತ ಮಾಹಿತಿ ಆಧರಿಸಿ ನಗರ ಠಾಣಾ ಪೋಲೀಸರು ಹಾಗೂ ಆಹಾರ ನೀರಿಕ್ಷಕರು ದಾಳಿ ನಡೆಸಿದ್ದು, ತ್ರಾಸಿ ಅಣ್ಣಪ್ಪಯ್ಯ ಸಭಾಭವನದ ಬಳಿ ಹೊಸ ಇಕೋ ವಾಹನದಲ್ಲಿ ಪಡಿತರ ಅನ್ನಭಾಗ್ಯದ ಅಕ್ಕಿ ಪತ್ತೆಯಾಗಿದೆ. ವಾಹನ ಚಾಲಕ ಪರಾರಿಯಾಗಿದ್ದು ಮೊಹಮ್ಮದ್ ಸಬಿಲ್‌ ಗೆ ಸೇರಿದ ವಾಹನ ಎಂದು ತಿಳಿದು ಬಂದಿದೆ.

ವಾಹನದಲ್ಲಿ ೨೪ ಅಕ್ಕಿ ತುಂಬಿದ ಚೀಲಗಳಿದ್ದು ಒಟ್ಟು ೧೫,೬೪೧ ರೂ. ಮೌಲ್ಯದ ೧,೦೪೩ ಕೆಜಿ ಅಕ್ಕಿ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net