ಬೆಳಗಾವಿ ಯುವಕ ಸಮುದ್ರಪಾಲು

drowning
Published on

ಕುಂದಾಪುರ: ಇಲ್ಲಿಗೆ ಸಮೀಪದ ಎಂ.ಕೋಡಿ ಸಮುದ್ರಕಿನಾರೆಯಲ್ಲಿ ಸಮುದ್ರಕ್ಕೆ ಸ್ನಾನಕ್ಕಾಗಿ ಇಳಿದ ಬೆಳಗಾವಿ ಮೂಲದವ ಮಂಜು ಎಂಬುವರು ನೀರು ಪಾಲಾಗಿದ್ದಾರೆ. ವಿಜಯಪುರ ಮೂಲದ ಇನ್ನಿಬ್ಬರು ಕೂಲಿಯಾಳುಗಳ ಜತೆ ಮಂಜು ಕೆಲಸಕ್ಕೆ ಬಂದಿದ್ದು ಮಧ್ಯಾಹ್ನ ಸ್ನಾನಕ್ಕೆ ತೆರಳಿದ ಸಂದರ್ಭ ಅಲೆಗಳ ಅಬ್ಬರಕ್ಕೆ ಮುಳುಗಿದ್ದಾರೆ. ರಕ್ಷಣೆಗೆ ಹೋದ ಇನ್ನೊಬ್ಬ ಕಾರ್ಮಿಕನನ್ನು ಸ್ಥಳೀಯ ಯುವಕರು ಮೇಲೆತ್ತಿದ್ದಾರೆ. ಮಂಜುವನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾದರೂ ಆತ ಅಷ್ಟರಲ್ಲಿ ಮೃತಪಟ್ಟಿದ್ದರು. ಮೃತದೇಹವನ್ನು ಕುಂದಾಪುರ ಶವಾಗಾರಕ್ಕೆ ಸಾಗಿಸಲಾಗಿದೆ. ಕುಂದಾಪುರ ನಗರ ಠಾಣೆ ಪ್ರಭಾರ ಉಪನಿರೀಕ್ಷಕ ಸುಬ್ಬಣ್ಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net