

ಕುಂದಾಪುರ : ಬಳ್ಕೂರು ಗ್ರಾಮ ಪಾನಕದಕಟ್ಟೆ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಕ್ರೇನ್ ಹಿಂದಿನಿಂದ ಡಿಕ್ಕಿ ಹೊಡೆದು ಬೈಕ್ ಸಹ ಸವಾರ ಮೃತಪಟ್ಟಿದ್ದಾರೆ.
ಬೈಕ್ ಸವಾರ ಪ್ರಶಾಂತ ಮೊಗವೀರ ಮೃತರು., ಬೈಕ್ ಚಲಾಯಿಸುತ್ತಿದ್ದ ದಿನೇಶ್ ಪೂಜಾರಿ ಗಂಭೀರ ಗಾಯಗೊಂಡಿದ್ದಾರೆ.
ಅಪರಿಚಿತ ಚಾಲಕ, ನೊಂದಣಿ ನಂಬ್ರ ಇಲ್ಲದ ಹೊಸ ಕ್ರೇನ್ ಅನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಬೈಕ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ನಂತರ ಕ್ರೈನ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.