

ರಾಯಚೂರು ರಸ್ತೆಯ ಬಾಂಡ್ ಕಲ್ಲಿಗೆ ಕಾರು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲಿ ಮೃತಪಟ್ಟಿದ್ದು, ಐದು ಜನರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ನಗರ ಸಮೀಪದ ಬೈಪಾಸ್ ಹತ್ತಿರದಲ್ಲಿ ಶನಿವಾರ ನಡೆದಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಟ್ರೇಶ್ವರ ಗ್ರಾಮದ ಹಾಜೀರಾ(65) ಮೃತ ಮಹಿಳೆ. ಉಡುಪಿಯಿಂದ ಹೈದರಾಬಾದ್‌ಗೆ ಪ್ರವಾಸಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಹಾಜೀರಾ( 65) ಮೃತಪಟ್ಟರೆ, ಇಶಾನ್ ಅಬ್ದುಲ್, ಇಲಾನ್‌ಇಸ್ಮಾಯಿಲ್, ಮಹಮದ್ ಇಜಾನ, ಮಹ್ಮದ್ ಇಮ್ರಾನ್ ಎಂಬುವವರು ಗಾಯಗೊಂಡಿದ್ದು, ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಲಾಗಿದೆ.
ಅಪಘಾತಕ್ಕೆ ವೇಗವಾಗಿ ವಾಹನ ಚಾಲನೆಯೇ ಕಾರಣವೆಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.