

ಕುಂದಾಪುರ: ಕರಾವಳಿ ಕರ್ನಾಟಕದ ಸ್ಥಳೀಯ ಪ್ರಯಾಣಿಕರ ದೃಷ್ಟಿಯಲ್ಲಿ ಉಡುಪಿ ಬಿಟ್ಟರೆ ಅತೀ ಹೆಚ್ವು ಜನ ಬಳಸುವ ಕುಂದಾಪುರ ರೈಲು ನಿಲ್ದಾಣ ಈಗ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ.
ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಬರುವ ಪ್ರಯಾಣಿಕರ ಜತೆ ಬೆಂಗಳೂರು, ಮುಂಬೈ, ಗುಜರಾತ್, ದೆಹಲಿ, ಪುಣೆ, ತಿರುಪತಿ ಕಡೆ ನಿತ್ಯ ಅಸಂಖ್ಯಾತ ಪ್ರಯಾಣಿಕರು ಪ್ರಯಾಣಿಸುವ ಈ ನಿಲ್ದಾಣದಲ್ಲಿ ಕೇವಲ ಕೆಲವೇ ಅಡಿಗಳಷ್ಟು ಮೇಲ್ಛಾವಣಿ ಇದ್ದಿದ್ದು, ನೆಲಹಾಸು ಕಿತ್ತು ಹೋಗಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗಿತ್ತು. ಮಳೆಗಾಲದಲ್ಲಂತೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಗಣೇಶ್ ಪುತ್ರನ್ ಮನವಿಯನ್ನು ಪರಿಗಣಿಸಿ ಲಯನ್ಸ್ ಕ್ಲಬ್ ಹಂಗಳೂರು ಅಧ್ಯಕ್ಷ ರೋಹನ್ ಡಿಕೋಸ್ಟ್ ಅವರು ಸವಾನ ಮನಸ್ಕ ಲಯನ್ಸ್ ಹಂಗಳೂರು ಸದಸ್ಯರ ಜತೆ ಸೇರಿ ಸಾರ್ವಜನಿರಿಗೆ ಶಾಶ್ವತ ಸೇವಾ ಯೋಜನೆಯಡಿ 65 ಲಕ್ಷಕ್ಕೂ ಅಧಿಕ ಮೌಲ್ಯದ ಕಾಮಗಾರಿಯನ್ನು ಕುಂದಾಪುರ ರೈಲು ನಿಲ್ದಾಣದಲ್ಲಿ ನಡೆಸುತ್ತಿದೆ. ಬಹು ಬೇಡಿಕೆಯ ಪ್ಲಾಟ್‌ಫಾರ್ಮ್ ವಾಡಿನ ವಿಸ್ತರಣೆ ಜತೆ ಅಸಮರ್ಪಕ ನೆಲಹಾಸಿನಿಂದ ಮುಕ್ತಗೊಂಡು ಹೊಸ ಟೈಲ್ಸ್ ಅಳವಡಿಸಲಾಗುತ್ತಿದೆ.
ಇದೀಗ ನಿಲ್ದಾಣದ ಎಡ ಭಾಗದ ಸಂಪೂರ್ಣ ಭಾಗ ಮೇಲ್ಛಾವಣಿ ಹೊಂದಲಿದೆ. ಅರ್ಧ ಭಾಗಕ್ಕೆ ಹೊಸ ನೆಲ ಹಾಸಿನ ಅಳವಡಿಕೆಯೂ ನಡೆದಿದೆ. ಲಯನ್ಸ್ ಕ್ಲಬ್ ಕುಂದಾಪುರ ರೈಲು ನಿಲ್ದಾಣದ ಹೊರಗಿನ ಸರ್ಕಲ್ ಮರು ವಿನ್ಯಾಸವನ್ನೂ ವಾಡುತ್ತಿದ್ದು ಅದರಲ್ಲಿ ಗಾರ್ಡನ್ ಮತ್ತು ಗಿಡಗಳ ಅಳವಡಿಕೆಯ ಕಾರ್ಯವನ್ನೂ ಕೈಗೆತ್ತಿಕೊಂಡಿದೆ.
ಒಟ್ಟಿನಲ್ಲಿ ದಶಕಗಳ ಬೇಡಿಕೆಯೊಂದು ಹಂಗಳೂರು ಲಯನ್ಸ್ ಮೂಲಕ ಈಡೇರುತ್ತಿರುವ ಹಿನ್ನೆಲೆಯಲ್ಲಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಕೊಂಕಣ ರೈಲ್ವೇ ಪ್ರಯಾಣಿಕರ ಸಲಹಾ ಸಮಿತಿಯ ಗಣೇಶ್ ಪುತ್ರನ್ ಸಂತಸ ವ್ಯಕ್ತಪಡಿಸಿದ್ದಾರೆ. ಶ್ರೀವೇ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ನಡೆಲಿದೆ ಎಂದು ಅವರು ತಿಳಿಸಿದ್ದಾರೆ.