

ಗಂಗೊಳ್ಳಿ: ಗಾಳಿ ಮಳೆಯಿಂದಾಗಿ ಶುಕ್ರವಾರವೂ ಕುಂದಾಪುರ, ಬೈಂದೂರು ತಾಲೂಕಿನ ಹಲವೆಡೆ ಹಾನಿ ಮುಂದುವರಿದಿದೆ. ಅನೇಕ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದ್ದರೆ, ಅಡಕೆ ಮರ ಉರುಳಿ ಬಿದ್ದು, ನಷ್ಟ ಉಂಟಾಗಿದೆ.
ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಸಾಧು ಪೂಜಾರ್ತಿ ಮನೆ, ಹಾಲಾಡಿ 76 ಗ್ರಾಮದ ಜನತಾ ಕಾಲನಿ ಗಿರಿಜಾ, ನಾಗರತ್ನ ಅವರ ಶೌಚಗೃಹಕ್ಕೆ ಮರ ಬಿದ್ದಿದ್ದು, ಹೊಸೂರು ಗ್ರಾಮದ ಸಾಧಮ್ಮ ಶೆಡ್ತಿ, ಮಂಜಿ ಕೋಂದೇವ, ಕಾವ್ರಾಡಿ ಗ್ರಾಮದ ವಾಲ್ತೂರಿನ ವಿಶಾಲಾಕ್ಷಿ, ಗುಲ್ವಾಡಿ ಗ್ರಾಮದ ಸರೋಜಾ, ಲಕ್ಷ್ಮೀ ಆಚಾರಿ, ಹಡವು ಗ್ರಾಮದ ಪಡುಕೋಣೆಯ ಗಿರಿಜಾ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಂಪಾರು ಗ್ರಾಮದ ಸಂತೋಷರವರ ಮನೆ ಹೆಂಚು ಗಾಳಿಗೆ ಹಾರಿ ಹೋಗಿದ್ದು, ಸಿದ್ದಾಪುರ ಗ್ರಾಮದ ಸುಶೀಲಾ ಪೂಜಾರ್ತಿಯವರ ಬಚ್ಚಲುಮನೆ ಗೋಡೆ ಕುಸಿದಿದೆ. ಉಳ್ಳೂರು 74 ಗ್ರಾಮದ ನೂಜಿನಬೈಲಿನ ಭೋಳು ಅವರ ಮನೆ ಗೋಡೆ ಕುಸಿದಿದೆ. ಕೆಂಚನೂರು ಗ್ರಾಮದ ಸಿಂಗಾರಿ ಶೆಡ್ತಿ ಅಡುಗೆ ಮನೆಗೆ ಮರ ಬಿದ್ದು ಹಾನಿಯಾಗಿದೆ. ಮರವಂತೆ ಗ್ರಾಮದ ನಡುಬೆಟ್ಟು ಸಾಕು, ಹಟ್ಟಿಯಂಗಡಿ ಗ್ರಾಮದ ಮಂಜಿ ಮನೆ ಗೋಡೆ ಬಿರುಕು ಬಿಟ್ಟಿದ್ದು, ಗಾಳಿಗೆ ಹಂಚು ಹಾರಿ ಹೋಗಿ ಹಾನಿಯಾಗಿದೆ.
ಕೊರ್ಗಿ ಗ್ರಾಮದ ನೂಜಿಯ ಬುಡ್ಡಿ ಕುಲಾಲ್ತಿ, ಹೊಸೂರು ಗ್ರಾಮದ ಸಾಧಮ್ಮ ಶೆಡ್ತಿ, ಕಾವ್ರಾಡಿ ಮುಳ್ಳುಗುಡ್ಡೆಯ ನಾಗಮ್ಮ, ಸರೋಜಿನಿ, ಸಿದ್ದಾಪುರ ಗ್ರಾಮದ ಒಳಲು ಭಾಸ್ಕರ ಪೂಜಾರಿ, ಉಳ್ಳೂರು 74 ಗ್ರಾಮದ ರಾಧಾ ಆಚಾರ್ತಿ, ಆಲೂರು ಗ್ರಾಮದ ನಾಗ ಪೂಜಾರಿ, ಸುಶಿಲಾ ಶೆಟ್ಟಿ ಅವರ ದನದ ಕೊಟ್ಟಿಗೆಗೆ ಹಾನಿ ಸಂಭವಿಸಿದೆ.