ವಿಶ್ವದೆಲ್ಲೆಡೆ ಕುಂದಾಪ್ರ ಭಾಷೆ ಪ್ರಚಲಿತ

kota (2)
Published on

ಕೋಟ: ಕುಂದಾಪ್ರ ಭಾಷೆ ತನ್ನದೆ ಆದ ಪರಂಪರೆಯನ್ನು ವಿಶ್ವದೆಲ್ಲೆಡೆ ಪಸರಿಸಿಕೊಂಡಿದೆ. ಇಲ್ಲಿನ ಭಾಷೆಯ ಜತೆಗೆ ಸಾಂಪ್ರದಾಯಿಕ ಬದುಕು ಕಟ್ಟಿಕೊಟ್ಟಿದೆ ಎಂದು ಸಾಹಿತಿ ಕುಂದಗನ್ನಡದ ಪೂರ್ಣಿವಾ ಕಮಲಶಿಲೆ ಹೇಳಿದರು.

ಭಾನುವಾರ ಕೋಟದ ಹಂದಟ್ಟು ಗೆಳೆಯರ ಬಳಗ ಗೀತಾನಂದ ವೇದಿಕೆಯಲ್ಲಿ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ನಡೆದ ನಾಲ್ಕನೇ ವರ್ಷದ ಆಸಾಡಿ ಒಡ್ರ್ 2025 ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸವಾಜ ಸೇವಕಿ ಡಾ.ವಾಣಿಶ್ರೀ ಐತಾಳ್ ಉದ್ಘಾಟಿಸಿದರು.

ಗ್ರಾಮೀಣ ಪರಿಕರವನ್ನು ವಾಜಿ ಜಿ.ಪಂ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಗ್ರಾಮೀಣ ತಿನಿಸುಗಳನ್ನು ಸಾಂಸ್ಕೃತಿಕ ಚಿಂತಕಿ ಪ್ರೇಮ ಶೆಟ್ಟಿ ಅನಾವರಣಗೊಳಿಸಿದರು. ಮಣೂರು ಮಹಾಲಿಂಗೇಶ್ವರ ದೇಗುಲ ಅಧ್ಯಕ್ಷ ಸತೀಶ್ ಎಚ್. ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಾವಾಜಿಕ ಚಿಂತಕಿ ಭಾರತಿ ವಿ.ಮಯ್ಯ ಅವರಿಗೆ ಆಸಾಡಿ ಒಡ್ರ್ ಸಾಧಕ ಪುರಸ್ಕಾರ ನೀಡಲಾಯಿತು. ಲೇಖಕಿ ಪೂರ್ಣಿವಾ ಕಲಮಶಿಲೆ ಅವರನ್ನು ಅಭಿನಂದಿಸಲಾಯಿತು.

ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ದಿನಸಿ ಪರಿಕರ ಹಸ್ತಾಂತರಿಸಲಾಯಿತು. ಮಹಿಳಾ ಮಂಡಲ ಗೌರವಾಧ್ಯಕ್ಷೆ ಕುಸುವಾ ದೇವಾಡಿಗ, ಯುವಕ ಮಂಡಲ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಯುವಕ ಮಂಡಲ ಅಧ್ಯಕ್ಷ ಮನೋಹರ್ ಪೂಜಾರಿ, ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ವಸಂತಿ ಕುಂದರ್ ಉಪಸ್ಥಿತರಿದ್ದರು.

ಸದಸ್ಯೆ ವೀಣಾ ಪ್ರಕಾಶ್ ಪಡುಕರೆ ಪ್ರಾಸ್ತಾವಿಸಿದರು. ಮಹಿಳಾ ಮಂಡಲ ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿ, ಕೋಶಾಧಿಕಾರಿ ಸುಜಾತ ಉದಯ್ ತಿಂಗಳಾಯ ವಂದಿಸಿದರು. ಸಂಚಾಲಕಿ ಸುಜಾತ ಬಾಯರಿ ಹಾಗೂ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿಸಿದರು. ಯುವಕ ಮಂಡಲ ಸಲಹಾ ಸಮಿತಿಯ ರವೀಂದ್ರ ಕೋಟ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net