ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಲ

kundana potest
ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ದುದ್ದನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳಾದ ನಾಗೇಶ್, ದರ್ಶನ್, ಮಂಜುನಾಥ್, ಕಾರ್ತಿಕ್, ಮನು, ರಾಕೇಶ್, ಮೋಹನ್, ರಂಜಿತ, ಅನಿಲ್, ಮುನಿರಾಮಯ್ಯ ಮತ್ತಿತರರಿದ್ದರು.
Published on

ಆಲೂರು ದುದ್ದನಹಳ್ಳಿ ಪಂಚಾಯಿತಿ ವಿರುದ್ಧ ಪ್ರತಿಭಟನೆ

ಹೋರಾಟದ ಎಚ್ಚರಿಕೆ


ವಿಜಯವಾಣಿ ಸುದ್ದಿಜಾಲ ಕುಂದಾಣ
ದುದ್ದನಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಚರಂಡಿ, ಕುಡಿಯುವ ನೀರು, ಒತ್ತುವರಿ ರಸ್ತೆಗಳ ತೆರವು, ಬೀದಿ ದೀಪಗಳ ರಿಪೇರಿ ಸೇರಿ ಹತ್ತು ಹಲವು ಮೂಲ ಸೌಕರ್ಯಗಳನ್ನು ಇಲ್ಲಿನ ಪಂಚಾಯಿತಿ ಚುನಾಯಿತ ಸದಸ್ಯರು ಹಾಗೂ ಅಧಿಕಾರಿಗಳು ಕಡೆಗಣಿಸುತ್ತಾ ಬಂದಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯ ಆಲೂರು ದುದ್ದನ ಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನಿಟ್ಟು ವಿವಿಧ ಬೇಡಿಕೆಗೆ ಆಗ್ರಹಿಸಿ ದುದ್ದನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ದುದ್ದನಹಳ್ಳಿಯಿಂದ ಬೈರದೇನಹಳ್ಳಿ ಮಾರ್ಗವಾಗಿ 8 ಅಡಿ ಅಗಲವಿರುವ ನಕಾಶೆ ರಸ್ತೆ ಹಾದು ಹೋಗುತ್ತಿದ್ದು, ರಸ್ತೆ ಸರಿಪಡಿಸುವ ಸಂಬಂಧ ಸಾಕಷ್ಟು ಬಾರಿ ಲಿಖಿತವಾಗಿ, ಮೌಖಿಕವಾಗಿ ಗಮನಕ್ಕೆ ತರಲಾಗಿದೆ, ಇದರಿಂದ ಮಣ್ಣಿನ ರಸ್ತೆ ಸಂಪೂರ್ಣ ಗುಂಡಿಗಳಾಗಿ ಉಳಿದಿದೆ. ರಸ್ತೆ ಅಭಿವೃದ್ಧಿಗಾಗಿ ಬಂದ ಅನುದಾನ ಸರ್ಕಾರಕ್ಕೆ ವಾಪಸ್ ಹೋಗುತ್ತಿದೆ ಮಳೆಗಾಲ ಬಂತೆಂದರೆ ಜನ ಜಾನುವಾರುಗಳು ಗುಂಡಿಗಳು ಬಿದ್ದಿರುವ ಮಣ್ಣಿನ ರಸ್ತೆಗಳ ಸಮಸ್ಯೆಯಿಂದ ಸಂಕಷ್ಟ ಎದುರಿಸುವಂತಾಗಿದೆ ಎಂದು ಗ್ರಾಮದ ಮುಖಂಡ ಅಶೋಕ್ ಹೇಳಿದರು. ಈ ಬಗ್ಗೆ ಕಳೆದ ಮೂರ‌್ನಾಲ್ಕು ವರ್ಷಗಳಿಂದ ನಡೆದ ಎಲ್ಲ ಗ್ರಾಮಸಭೆಗಳಲ್ಲೂ ಲಿಖಿತ ರೂಪದಲ್ಲಿ ಗಮನಕ್ಕೆ ತರಲಾಗಿದೆ ಆದರೂ ಜನಪ್ರತಿನಿಧಿಗಳು ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗ ನಮ್ಮ ಅಹವಾಲಿಗೆ ಕವಡೆ ಕಾಸಿನ ಬೆಲೆ ನೀಡದೆ ನಿರ್ಲಕ್ಷಿಸುತ್ತಾ ಬಂದಿದ್ದಾರೆ ಎಂದು ದೂರಿದರು.
ಜನವಸತಿ ಪ್ರದೇಶಗಳಲ್ಲಿ ಮನೆಯಿಂದ ಮನೆಗೆ ತೆರಳಲು ರಸ್ತೆ ಸಂಪರ್ಕ ಕಲ್ಪಿಸುವಲ್ಲಿ ವಿಲವಾಗಿದ್ದಾರೆ. ಗ್ರಾಮಸ್ಥರಲ್ಲಿ ಸಾಮರಸ್ಯ ಮೂಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು ರಸ್ತೆಗೆ ಜಾಗ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.ಚರಂಡಿಗಳು ವರ್ಷ ಕಳೆದರೂ ಸ್ವಚ್ಛ ಗೊಳಿಸದೆ ದುರ್ವಾಸನೆ ಬೀರುತ್ತಿವೆ. ಸಂಜೆ ಆಗುತ್ತಿದ್ದಂತೆ ಸೊಳ್ಳೆಗಳ ಕಾಟ ತಡೆಯಲಾಗುತ್ತಿಲ್ಲ. ಗ್ರಾಮಸ್ಥರು ಪಂಚಾಯಿತಿಗೆ ನೀಡುವ ತೆರಿಗೆ ಹಣ ಯಾವೆಲ್ಲ ಅಭಿವೃದ್ಧಿಗೆ ವಿನಿಯೋಗಿ ಸುತ್ತಿದ್ದಾರೆ ತಿಳಿಯುತ್ತಿಲ್ಲ, ಬಡ ಕುಟುಂಬಗಳು ಅತಿ ಹೆಚ್ಚಾಗಿ ವಾಸ ಮಾಡುವ ಗ್ರಾಮವಾಗಿದೆ. ನಮ್ಮೆಲ್ಲ ಬೇಡಿಕೆಗಳಿಗೆ ಸಂಬಂಧಪಟ್ಟವರು ಪರಿಹಾರ ನೀಡದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಮಹಿಳೆಯರಿಗೆ ಭೀತಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net