ಉಚಿತ ಬಸ್ ಪ್ರಯಾಣಕ್ಕಾಗಿ ಬುರ್ಖಾ ಧರಿಸಿದ ಭೂಪ!

6-kdl-burkha
Published on

ಕುಂದಗೋಳ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಪ್ರಯೋಜನ ಪಡೆದ ಪುರುಷನೊಬ್ಬ ಪೇಚಿಗೆ ಸಿಲುಕಿಕೊಂಡ ಪ್ರಸಂಗ ತಾಲೂಕಿನ ಸಂಶಿ ಗ್ರಾಮದ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
ಬುರ್ಖಾ ಧರಿಸಿದ ವ್ಯಕ್ತಿ ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಗೋಡಗೇರಿ ಗ್ರಾಮದ ವೀರಭಧ್ರಯ್ಯ ನಿಂಗಯ್ಯ ಮಠಪತಿ ಎಂದು ಪರಿಚಯಿಸಿಕೊಂಡಿದ್ದು, ಭಿಕ್ಷಾಟನೆಗಾಗಿ ಬಂದಿರುವುದಾಗಿ ತಿಳಿಸಿದ್ದಾನೆ.
ಥೇಟ್ ಮಹಿಳೆಯರಂತೆ ಬುರ್ಖಾ ತೊಟ್ಟು ಬಂದಿದ್ದ ಈತನ ಚಲನವಲನ ಗಮಿನಿಸಿದ ಸ್ಥಳೀಯರು ಅನುಮಾನಗೊಂಡು ಪರೀಕ್ಷಿಸಿದಾಗ ಪ್ರಯಾಣಿಕ ಮಹಿಳೆಯಲ್ಲ ಪುರುಷ ಎಂಬುದು ಗೊತ್ತಾಗಿದೆ. ಈ ಕುರಿತು ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net