

ಧಾರವಾಡ: ನಿವೃತ್ತ ಮುಖ್ಯಾಧ್ಯಾಪಕ ಪಿಂಚಣಿ, ಗಳಿಕೆ ರಜೆಗೆ ವೇತನ ಮಂಜೂರಾತಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ಕುಂದಗೋಳ ಕ್ಷೇತ್ರ ಶಿಕ್ಷಣಾಽಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹರ್ಲಾಪುರ ಗ್ರಾಮದ ನಿವೃತ್ತ ಮುಖ್ಯಾಧ್ಯಾಪಕ ಮಂಜುನಾಥ ಕುರುವಿನಶೆಟ್ಟಿ ಎಂಬುವರ ಪಿಂಚಣಿ, ಗಳಿಕೆ ರಜೆ ಮಂಜೂರಾತಿಗೆ ಬಿಇಒ ವಿದ್ಯಾ ಕುಂದರಗಿ ಅವರು 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದಾಖಲಾತಿಗಳಿಗೆ ಸಹಿ ಹಾಕಲು ಲಂಚಕ್ಕೆ ಬೇಡಿಕೆ ಇಟ್ಟು ಸತಾಯಿಸುತ್ತಿದ್ದ ಬಿಇಒ ವಿರುದ್ಧ ಮಂಜುನಾಥ, ಲೋಕಾಯುಕ್ತರಿಗೆ ದೂರು ನೀಡಿದ್ದರು. ವಿದ್ಯಾ ಅವರು 8,000 ರೂ. ಲಂಚ ಪಡೆಯುತ್ತಿದ್ದ ವೇಳೆ ಡಿವೈಎಸ್‌ಪಿ ಶಂಕರ ರಾಗಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಲೆಗೆ ಬೀಳಿಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಸತೀಶ ಚಿಟಗುಪ್ಪಿ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬಸವರಾಜ ಮೂಕರ್ತಿಹಾಳ, ತೇಜಸ್ವಿನಿ ಸೊಪ್ಪಿ, ಕಾರ್ತಿಕ ಹುಯಿಲಗೋಳ, ಬಿ.ಎಸ್. ದೇಸಾಯಿಗೌಡರ, ಪರಪ್ಪ ಯಲ್ಲಟ್ಟಿ, ಇತರರು ದಾಳಿಯಲ್ಲಿದ್ದರು.