ಸಮಾಜದಲ್ಲಿ ನಶಿಸುತ್ತಿದೆ ಮೌಲ್ಯಾಧಾರಿತ ಜೀವನ

hnl kunchitiga june 7
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
Published on

ಹೊನ್ನಾಳಿ: ವಿವೇಕ- ವಿವೇಚನೆ ಇಲ್ಲದ ಶಿಕ್ಷಣದಿಂದ ಮೌಲ್ಯಾಧಾರಿತ ಜೀವನ ನಶಿಸುತ್ತಿದೆ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಜಗದ್ಗುರು ಶಾಂತವೀರ ಸ್ವಾಮೀಜಿ ಹೇಳಿದರು.

ಹೊನ್ನಾಳಿ- ನ್ಯಾಮತಿ ತಾಲೂಕು ಕುಂಚಿಟಿಗ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಹೇಳಿಕೊಡದಿರವ ಕಾರಣ ಪ್ರಸ್ತುತ ಹಿರಿಯರಿಗೆ ಗೌರವ ಕೊಡುವುದೇ ಗೊತ್ತಿಲ್ಲ. ಇದು ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಹಿಂದಿನ ಕಾಲದಲ್ಲಿ ಕಡಿಮೆ ವಿದ್ಯಾಭ್ಯಾಸ ಮಾಡಿದರೆ ಉದ್ಯೋಗ ಸಿಗುತ್ತಿತ್ತು, ಆದರೆ ಇಂದು ಉನ್ನತ ವ್ಯಾಸಂಗ ಮಾಡಿದರೂ ನಿರುದ್ಯೋಗ ಸಮಸ್ಯೆ ಇದೆ ಎಂದರು.

ಇತ್ತೀಚಿನ ದಿನಗಳಲ್ಲಿ ವೈದ್ಯ, ಇಂಜಿನಿಯರ್, ಜಿಲ್ಲಾಧಿಕಾರಿ, ತಹಸೀಲ್ದಾರ್ ಸೇರಿ ಅನೇಕ ಹುದ್ದೆಗಳಿಗೆ ಆಯ್ಕೆಯಾಗಬೇಕಾದರೆ ಕೋಟಿಗಟ್ಟಲೆ ಹಣ ನೀಡಬೇಕಾಗಿದೆ. ಅಲ್ಲದೇ ಸ್ವಜನ ಪಕ್ಷಪಾತ, ಜಾತಿ ರಾಜಕಾರಣ ಹೀಗೆ ಹಲವು ಸಮಸ್ಯೆಗಳಿವೆ ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಮುರುಳಿಧರ್ ಹಾಲಪ್ಪ ಮಾತನಾಡಿ, ಇತಿಹಾಸದುದ್ದಕ್ಕೂ ನೋಡಿದರೆ ಶಿಕ್ಷಣದಲ್ಲಿ ಮತ್ತು ಪಾಲಕರನ್ನು ನೋಡಿಕೊಳ್ಳುವುದರಲ್ಲಿ ಮುಂದಿರುವುದು ಹೆಣ್ಣುಮಕ್ಕಳೇ. ಒಂದು ಕಾಲಕ್ಕೆ ಗಂಡು ಸಂತಾನ ಬೇಕು ಎಂದು ಹಂಬಲಿಸುತ್ತಿದ್ದರು ಆದರೀಗ ಹೆಣ್ಣಿಗಾಗಿ ಹಾತೊರೆಯುತ್ತಿದ್ದಾರೆ. ಸಮಾಜದಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನ ಸಿಕ್ಕಿದೆ ಎಂದರು.

ಕುಂಚಿಟಿಗ ನೌಕರರ ಸಂಘದ ತಾಲೂಕಾಧ್ಯಕ್ಷ, ಶಿಕ್ಷಕ ತಿಮ್ಮಪ್ಪ ಮಾತನಾಡಿ, ಕಳೆದ 26 ವರ್ಷಗಳಿಂದ ಸಂಘದ ವತಿಯಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಾ ಬಂದಿದ್ದೇವೆ. ಪಾಲಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಮುಖಂಡರಾದ ಸುರೇಶ್, ವರದರಾಜಪ್ಪಗೌಡ್ರು, ರಂಗನಗೌಡ್ರು, ಮಂಜುನಾಥ್ ಹಾಗೂ ಚನ್ನಬಸಪ್ಪ ಮಾತನಾಡಿದರು.

ನೌಕರರ ಸಂಘದ ಪ್ರಮುಖರಾದ ಸಂತೋಷ್, ಅರುಣ್​ಕುಮಾರ್, ಡಾ. ಬಾಲರಾಜ್, ನರಸಿಂಹಪ್ಪ, ಪ್ರಹ್ಲಾದ್, ಶಾಂತರಾಜ್, ಪುರುಷೋತ್ತಮ, ರವಿಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net