

ಹಿರೇಕೆರೂರ: ಕುಮುದ್ವತಿ ನದಿ ಬಳಿ ಬಹಿರ್ದೆಸೆಗೆ ಹೋಗಿ ಕಾಲು ತೊಳೆಯಲು ನದಿಗೆ ಹೋದ ದೈಹಿಕ ಶಿಣ ಅಧಿಕಾರಿ ನೀರಿನಲ್ಲಿ ಬಿದ್ದು ಮೃತಪಟ್ಟ ಟನೆ ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಬಳಿ ಶುಕ್ರವಾರ ನಡೆದಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರೇವಣಸಿದ್ದಪ್ಪ ಎಂ. (58) ಮತ ಅಧಿಕಾರಿ.
ಇವರು ಹಿರೇಕೆರೂರ ಬಿಇಒ ಕಚೇರಿಯಲ್ಲಿ ದೈಹಿಕ ಶಿಣ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಿಪ್ಪಾಯಿಕೊಪ್ಪ ಗ್ರಾಮದ ಹತ್ತಿರ ಕುಮುದ್ವತಿ ನದಿ ದಂಡೆಯಲ್ಲಿ ಬಹಿರ್ದೆಸೆಗೆ ಹೋಗಿದ್ದಾರೆ. ನಂತರ ಕಾಲು ತೊಳೆದುಕೊಳ್ಳಲು ನದಿಗೆ ಇಳಿದಾಗ ಜಾರಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.