

ಕುಮಟಾ/ಭಟ್ಕಳ:ಕೆಲಸದ ವಿಚಾರದಲ್ಲಿ ಕುಮಟಾ ಪುರಸಭೆ ಮುಖ್ಯಾಧಿಕಾರಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕುಮಟಾ ಪುರಸಭೆಯ ಕಂದಾಯ ನಿರೀಕ್ಷಕ ನಾಪತ್ತೆಯಾದ ಘಟನೆ ನಡೆದಿದೆ.
ಭಟ್ಕಳ ಕೋಟೆಶ್ವರ ಹರಿಜನಕೇರಿ ವೆಂಕಟೇಶ್ ರಮೇಶ್ ಹರಿಜನ (25) ಕಾಣೆಯಾದವರು. ಅವರ ತಾಯಿ ಆಶಾ ರಮೇಶ್ ಹರಿಜನ ಅವರು ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
`ತನ್ನ ಮಗ ಪುರಸಭೆಯ ಮುಖ್ಯಾಽಕಾರಿಯಿಂದ ಕೆಲಸದ ವಿಚಾರದಲ್ಲಿ ನಿರಂತರವಾಗಿ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದ.ಅದನ್ನೇ ಮನಸ್ಸಿಗೆ ಹಚ್ಚಿಕೊಂಡು, ಮಧ್ಯರಾತ್ರಿ ಮನೆಯಿಂದ ಯಾರಿಗೂ ಹೇಳದೆ ಹೊರಟು ಕಾಣೆಯಾಗಿದ್ದಾನೆ. ಮನೆಯಿಂದ ನಾಪತ್ತೆಯಾಗುವ ಮುನ್ನ ಪುರಸಭೆಯ ಅಽಕಾರಿಯ ವಿರುದ್ಧ ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಾನೆ' ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಅ.7 ರಂದು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ವ್ಯಾಪ್ತಿಯ ಹೆದ್ದಾರಿ ಪಕ್ಕದ ಹೋಟೆಲ್‌ನ ಅನಽಕೃತ ಕಟ್ಟಡವೊಂದನ್ನು ಅಽಕೃತವೆಂದು ದಾಖಲಿಸಲು ಪುರಸಭೆ ಮುಖ್ಯಾಽಕಾರಿ ಎಂ.ಆರ್.ಸ್ವಾಮಿ ತೀವ್ರ ಒತ್ತಡ ಹಾಕಿದ್ದಾರೆ. ಅದಕ್ಕಾಗಿ ಶಾಸಕ ದಿನಕರ ಶೆಟ್ಟಿ ಹೆಸರನ್ನು ಉಲ್ಲೇಖಿಸಿದ್ದಾರೆ. ಅದಕ್ಕೆ 4 ಲಕ್ಷ ರೂ. ಹಣ ಸಿಗುತ್ತದೆ ಎಂದು ಹೇಳುತ್ತಿದ್ದರು. ಅದಕ್ಕೆ ನಾನು ಒಪ್ಪದೇ ಇದ್ದಾಗ ಅವಾಚ್ಯವಾಗಿ ನಿಂದಿಸಿದ್ದಾರೆ. ಹಲ್ಲೆ ಮಾಡಲು ಬಂದಿದ್ದರು. ಅವರು ಈ ಹಿಂದೆಯೂ ನನ್ನನ್ನು ಅವಾಚ್ಯವಾಗಿ ನಿಂದಿಸಿದ್ದರು. ಹೀಗಾಗಿ ದುಃಖವಾಗಿದ್ದು, ನಿಮ್ಮನ್ನೆಲ್ಲ ಬಿಟ್ಟು ದೂರ ಹೋಗುತ್ತಿದ್ದೇನೆ. ಸಹೋದ್ಯೋಗಿಗಳನ್ನು ಬಿಟ್ಟು ಹೋಗುತ್ತಿರುವುದಕ್ಕೆ ಬೇಸರವಾಗುತ್ತಿದೆ. ನೀವು ನಮ್ಮಂತೆ ಆಗಬಾರದು ಎಂದು ನಾನು ಈ ರೀತಿ ಮಾಡುತ್ತಿರುವ ಎಂದು ಪುರಸಭೆಯ ಕಂದಾಯ ನಿರೀಕ್ಷಕ ವೆಂಕಟೇಶ ಆರ್. ಬರೆದಿದ್ದಾರೆ ಪತ್ರದಲ್ಲಿ ವಿವರಗಳಿವೆ.
ಪತ್ರವನ್ನು ತಮ್ಮ ತಾಯಿಗೆ ಕಳುಹಿಸಿ ನಂತರ ಸಿಬ್ಬಂದಿ ವಾಟ್ಸ್ಆ್ಯಪ್ ಗ್ರೂಪ್‌ಗೂ ಹಂಚಿಕೊಂಡಿದ್ದಾರೆ ತಿಳಿದುಬಂದಿದೆ.ಈ ಬಗ್ಗೆ ಕುಟುಂಬವು ಪುರಸಭೆ ಅಧ್ಯಕ್ಷೆ ಸುಮತಿ ಭಟ್ ಅವರಿಗೆ ಮುಖ್ಯಾಽಕಾರಿ ಎಂ.ಆರ್.ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ನೀಡಿರುವುದಾಗಿ ತಿಳಿದುಬಂದಿದೆ.