ಹೊಲನಗದ್ದೆ ಗ್ರಾಪಂಗೆ ಎಂ.ಎಂ. ಹೆಗಡೆ ಚೇರ್ಮನ್

11-KMT-HOLANGADE AYKE
Published on

ಕುಮಟಾ: ತಾಲೂಕಿನ 6 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. ಹನೇಹಳ್ಳಿಗೆ ಸಣ್ಣು ಹುಲಿಯಪ್ಪ ಗೌಡ ಅಧ್ಯಕ್ಷ, ಭಾರತಿ ರಾಮಚಂದ್ರ ನಾಯ್ಕ ಉಪಾಧ್ಯಕ್ಷೆ. ಬರ್ಗಿಯಲ್ಲಿ ಸಂತೋಷ ಸುಬ್ರಾಯ ಹರಿಕಂತ್ರ ಅಧ್ಯಕ್ಷ, ಮಹಾಲಕ್ಷ್ಮೀ ಮುರಲೀಧರ ಶೆಟ್ಟಿ ಉಪಾಧ್ಯಕ್ಷೆ. ಮಿರ್ಜಾನನಲ್ಲಿ ಜೋಸ್ಟಿನ್ ರೋಜಾರ್ ಡಿಸೋಜಾ ಅಧ್ಯಕ್ಷೆ, ಮಂಜುನಾಥ ನಾಗಪ್ಪ ಹರಿಕಂತ್ರ ಉಪಾಧ್ಯಕ್ಷ. ಹೊಲನಗದ್ದೆ ಎಂ.ಎಂ. ಹೆಗಡೆ ಅಧ್ಯಕ್ಷ, ಮಹಾಂತೇಶ ನಾಗೇಶ ಹರಿಕಂತ್ರ ಉಪಾಧ್ಯಕ್ಷ. ದೇವಗಿರಿ ವೀಣಾ ದೇವರಾಯ ದುರ್ಗೇಕರ ಅಧ್ಯಕ್ಷೆ, ಸುರೇಶ ತಿಮ್ಮಪ್ಪ ನಾಯ್ಕ ಉಪಾಧ್ಯಕ್ಷ. ಕಲ್ಲಬ್ಬೆ ಕಮಲಾ ನಾಗರಾಜ ಮುಕ್ರಿ ಅಧ್ಯಕ್ಷೆ, ರವಿ ಗಜಾನನ ಹೆಗಡೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಹೊಲನಗದ್ದೆಯಲ್ಲಿ ಸತತ 6 ಬಾರಿ ಪಂಚಾಯಿತಿಗೆ ಆಯ್ಕೆಯಾದರೂ ಅಧ್ಯಕ್ಷ ಗಾದಿ ವಂಚಿತರಾಗಿದ್ದ ಎಂ.ಎಂ. ಹೆಗಡೆ ಅವರು ಈ ಬಾರಿ ಎರಡನೇ ಅವಧಿಯಲ್ಲಿ ಮತದಾನದ ಮೂಲಕ ನಡೆದ ಆಯ್ಕೆಯಲ್ಲಿ ಗೆಲುವು ಸಾಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net