

ಕುಮಟಾ: ಪ್ರತಿಭಾವಂತ ಮಕ್ಕಳು ಆರ್ಥಿಕ ಸಮಸ್ಯೆಯಿಂದ ಶೈಕ್ಷಣಿಕ ಗುರಿ, ಅವಕಾಶಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಮಾಜದ ಸಂಘಟನೆಗಳು ಈಗೀಗ ಹೆಚ್ಚೆಚ್ಚು ಬೆಂಬಲವಾಗಿ ನಿಲ್ಲುತ್ತಿವೆ. ಸಮಾಜದ ಪುರಸ್ಕಾರಕ್ಕೆ ಪಾತ್ರರಾದವರೇ ಪುಣ್ಯವಂತರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪಟ್ಟಣದ ನಾಮಧಾರಿ ಸಭಾಭವನದಲ್ಲಿ ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದಿಂದ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸಮಾಜಕ್ಕಾಗಿ ತ್ಯಾಗ, ಸೇವೆ ಮಾಡಿದ ಡಾ. ಎಂ.ಡಿ. ನಾಯ್ಕ ಅಂತಹವರನ್ನು ಸದಾ ಸ್ಮರಿಸಬೇಕು. ಯುವ ಪೀಳಿಗೆ ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು ಎಂದರು.
ಸಚಿವ ಮಂಕಾಳ ವೈದ್ಯ, ಶಾಸಕ ಭೀಮಣ್ಣ ನಾಯ್ಕ, ವಿಶೇಷ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ವಿಜೇತ ವಿಘ್ನೇಶ ನಾಯ್ಕ, ಸಾಂಸ್ಕೃತಿಕ ಕ್ಷೇತ್ರದ ಸಾಧಕ ಬಾಬು ಶಿವಪ್ಪ ನಾಯ್ಕ ಹಾಗೂ ಯಕ್ಷಗಾನ ಭಾಗವತ ಕೋಡ್ಕಣಿಯ ಗಣಪತಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ನಾಮಧಾರಿ ತಾಲೂಕಾಧ್ಯಕ್ಷ ಮಂಜುನಾಥ ಆರ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಉಪಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕ, ಆರ್.ಎಚ್. ನಾಯ್ಕ, ಎಂ.ಜಿ. ನಾಯ್ಕ, ಮಮತಾ ನಾಯ್ಕ, ಸೂರಜ ನಾಯ್ಕ, ರತ್ನಾಕರ ನಾಯ್ಕ, ಆರ್ಯ ಈಡಿಗ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್. ನಾಯ್ಕ, ಎಚ್. ಆರ್. ನಾಯ್ಕ, ಎನ್.ಆರ್. ನಾಯ್ಕ, ಭಾರತಿ ನಾಯ್ಕ, ಮುಕ್ತಾ ನಾಯ್ಕ, ಯುವ ನಾಮಧಾರಿ ಅಧ್ಯಕ್ಷ ರಾಜೇಶ ನಾಯ್ಕ, ಶಿಕ್ಷಕ ಮಂಜುನಾಥ ನಾಯ್ಕ, ಅರುಣ ನಾಯ್ಕ, ರಾಘವೇಂದ್ರ ನಾಯ್ಕ, ಆರ್.ಜಿ. ನಾಯ್ಕ, ಸುಧೇಶ ನಾಯ್ಕ, ಗೀತಾ ನಾಯ್ಕ, ಪ್ರಶಾಂತ ನಾಯ್ಕ ಹೆಬೈಲ್, ಕಮಲಾಕರ ನಾಯ್ಕ, ವೈಭವ ನಾಯ್ಕ, ರೇಖಾ ನಾಯ್ಕ, ದತ್ತಾತ್ರಯ ನಾಯ್ಕ, ಕಿರಣ ನಾಯ್ಕ ಇತರರಿದ್ದರು.