ಕುಂಪಲದಲ್ಲಿ ಈ ವರ್ಷದಿಂದ ಡಿಜೆ ಬ್ರೇಕ್!

New Project (31)
Published on

ಉಳ್ಳಾಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ಪ್ರತಿವರ್ಷ ಆಚರಿಸಲಾಗುವ ಕುಂಪಲಾಷ್ಟಮಿಯಲ್ಲಿ ಗಮನಸೆಳೆಯುತ್ತಿದ್ದ ಡಿಜೆ ಸೌಂಡನ್ನು ಈ ವರ್ಷದಿಂದ ನಿಲ್ಲಿಸಲಾಗುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಅದ್ದೂರಿಯಾಗಿ ಆಚರಿಸಲ್ಪಡುವ ಪ್ರಮುಖ ಪ್ರದೇಶಗಳಲ್ಲಿ ಕುಂಪಲವೂ ಒಂದು. ಇಲ್ಲಿನ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ಪ್ರತಿವರ್ಷ ಕುಂಪಲಾಷ್ಟಮಿ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಆದರೆ ಈ ಬಾರಿ ಡಿ.ಜೆ.ಗೆ ಬ್ರೇಕ್ ಹಾಕುವ ತೀರ್ಮಾನವನ್ನು ಸಮಿತಿ ತೆಗೆದುಕೊಂಡಿದೆ. ಆ.15ರಂದು ಕುಂಪಲಾಷ್ಟಮಿ ಉತ್ಸವ ನಡೆಯಲಿದ್ದು ಸಂಜೆ ನಡೆಯುವ ಭವ್ಯ ಶೋಭಾಯಾತ್ರೆಯಲ್ಲಿ ಸಂಘ-ಸಂಸ್ಥೆಗಳ ಪೌರಾಣಿಕ ದೃಶ್ಯರೂಪಕ, ಹುಲಿವೇಷ ಕುಣಿತ, ವಿವಿಧ ವಾಧ್ಯಘೋಷಗಳು ಇರಲಿವೆ. ಆದರೆ ಡಿ.ಜೆ.ಸೌಂಡ್‌ಗೆ ಅವಕಾಶ ನೀಡದಿರಲು ಮಂದಿರದ ಸದಸ್ಯರು, ಊರಿನ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಸಂಸ್ಕಾರಯುತವಾಗಿ ನಡೆಯಲು ಹಾಗೂ ಆರೋಗ್ಯದ ಹಿತದೃಷ್ಟಿಯಿಂದಲೂ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನುವುದು ಸಂಘಟಕರ ಅಭಿಪ್ರಾಯ.

ಶ್ರೀ ಕೃಷ್ಣ ಜನ್ಮಾಷ್ಟಮಿಯಿಂದ ಧಾರ್ಮಿಕ ಜಾಗೃತಿ ಜತೆ ಸಂಘಟನಾತ್ಮಕ ಕಾರ್ಯವೂ ಆಗುತ್ತದೆ. ಧಾರ್ಮಿಕ ನಂಬಿಕೆ ಜತೆ ಸಮಾಜದಲ್ಲಿ ಒಗ್ಗಟ್ಟಿಗೆ ಸಹಕಾರಿ. ಆರೋಗ್ಯದ ದೃಷ್ಟಿಯಿಂದ ಡಿ.ಜೆ. ಬಳಸದಿದ್ದರೆ ಉತ್ತಮ. ಸಂಸ್ಕೃತಿ, ಸಂಸ್ಕಾರದ ವಿಚಾರದಲ್ಲೂ ಡಿ.ಜೆ. ನಿಷೇಧ ಕ್ರಮ ಸರಿಯಾಗಿದೆ. ಸತೀಶ್ ಕುಂಪಲ ಕುಂಪಲ ಶ್ರೀ ಬಾಲಕೃಷ್ಣ ಮಂದಿರ ಅಧ್ಯಕ್ಷ https://www.vijayavani.net/high-level-meeting-at-vidhana-soudha-to-soon-allow-red-stone-mining-in-dakshina-kannada-district-under-new-rules-and-regulations https://www.vijayavani.net/kavana-sankalana

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net