ಅನ್ನಪೂರ್ಣೇಶ್ವರಿಗೆ ಕುಂಕುಮಾರ್ಚನೆ

kls annaporna
Published on

ಕಳಸ: ನವರಾತ್ರಿ ಎಂಟನೇ ದಿನ ಗುರುವಾರ ಹೊರನಾಡ ಮಾತೆ ಅನ್ನಪೂರ್ಣೇಶ್ವರಿ ವಿಶೇಷ ಅಲಂಕಾರವಾಗಿ ವೃಷಭಾರೂಢಾ ತ್ರಿಮೂರ್ತಿಯಾಗಿ ಕಂಗೊಳಿಸಿದಳು.

ಅನ್ನಪೂರ್ಣೇಶ್ವರಿಗೆ ವಿಶೇಷ ಅಲಂಕಾರದ ಜತೆಗೆ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ, ಶ್ರೀದುರ್ಗಾ ಮೂಲಮಂತ್ರ ಹೋಮ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಸಂತವಾಣಿ ಪಿ.ಸುಧಾಕರ ಮತ್ತು ತಂಡದಿಂದ ಸುಗಮ ಸಂಗೀತ, ಸಂಜೆ ವಿದುಷಿ ಡಾ.ಚೈತ್ರಾ ರಾವ್ ಮತ್ತು ತಂಡ ಬೆಂಗಳೂರು ಇವರಿಂದ ಭರತನಾಟ್ಯ ನಡೆಯಿತು.
ಶುಕ್ರವಾರ ಅನ್ನಪೂರ್ಣೇಗೆ ಸಿಂಹಾರೂಢಾ ಸಿದ್ಧಿಧಾತ್ರಿ ಅಲಂಕಾರ ಪೂಜೆ, ಶ್ರೀ ಚಂಡಿಕಾ ಮೂಲಮಂತ್ರ ಹೋಮ ಹಾಗೂ ಆಯುಧ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ವೀಣಾ ವಾದನ, ಸಂಜೆ ಭರತನಾಟ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net