

ಪುತ್ತೂರು ಗ್ರಾಮಾಂತರ: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 2024-25ನೇ ಸಾಲಿನಲ್ಲಿ 333 ಕೋಟಿ ರೂ. ವ್ಯವಹಾರ ನಡೆಸಿ 1.04 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ವರದಿ ವರ್ಷದಲ್ಲಿ ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಘೋಷಿಸಿದರು.
ಕುಂಬ್ರದಲ್ಲಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್. ಮಂಡಿಸಿದರು. ಲೆಕ್ಕಿಗರಾದ ವೀಣಾ ರೈ ಲೆಕ್ಕಪರಿಶೋಧನಾ ವರದಿ ಮಂಡಿಸಿದರು.
ಉಪಾಧ್ಯಕ್ಷ ಸೂರ್ಯನಾರಾಯಣ ಭಟ್, ನಿರ್ದೇಶಕರಾದ ಉಮೇಶ್ ಗೌಡ ಕೆ.ಕನ್ನಯ, ವಿನೋದ್ ಶೆಟ್ಟಿ ಅರಿಯಡ್ಕ, ಮಲ್ಲಿಕಾ ಎ.ಜೆ.ಆಲಂತ್ತಡ್ಕ, ಸತೀಶ್ ಕರ್ಕೇರ ಮಡ್ಯಂಗಳ, ಶಿವರಾಮ ಬಿ.ಬೊಳ್ಳಾಡಿ, ಸಂತೋಷ್ ಆಳ್ವ ಎ.ಸಿ. ಗಿರಿನಿಲಯ, ಶ್ರೀನಿವಾಸ ಪ್ರಸಾದ್ ಮುಡಾಲ, ವಸಂತ ಕುಮಾರ್ ಕೌಡಿಚ್ಚಾರ್, ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಶರತ್ ಡಿ., ಸಂಘದ ಶಾಖಾ ವ್ಯವಸ್ಥಾಪಕ ರಾಜ್‌ಪ್ರಕಾಶ್ ರೈ ಕುಂಬ್ರ, ಗುಮಾಸ್ತರಾದ ರಾಜ್‌ಕಿರಣ್ ರೈ, ಭರತ್ ಎಸ್.ಎನ್., ಶಾಂತ ಕುಮಾರ, ಜವಾನ ವೆಂಕಪ್ಪ ಡಿ., ಸಿಬ್ಬಂದಿ ಹರೀಶ್ ಕೆ., ಹರ್ಷಿತಾ, ಪ್ರೀತಿ, ಕರುಣಾಕರ ಮತ್ತು ಪ್ರದ್ವಿನ್ ಪ್ರಸಾದ್ ಮೊದಲಾದವರಿದ್ದರು. ನಿರ್ದೇಶಕ ಅಮರನಾಥ ರೈ ಸ್ವಾಗತಿಸಿದರು. ಉದಯಶಂಕರ ಕೆ.ಪಿ. ಪ್ರಾರ್ಥಿಸಿದರು. ಸಂತೋಷ್ ರೈ ಕೈಕಾರ, ಸುಭಾಶ್ಚಂದ್ರ ರೈ ಬೆಳ್ಳಿಪ್ಪಾಡಿ, ನಾರಾಯಣ ಕುಕ್ಕುಪುಣಿ ನಿರೂಪಿಸಿದರು. ನಿರ್ದೇಶಕಿ ರಾಜೀವಿ ಎಸ್.ರೈ ವಂದಿಸಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾರಿಕಾ ರೈ ಸುಳ್ಯಪದವು, ಆಯಿಷತ್ ಅಝೀನಾ ಕುಂಬ್ರ, ನುಸ್ರತ್ ಸಮೀಮ, ಪ್ರಣ್ಯ, ರಶ್ಮಿತಾ, ಸನ್ಮಿಕಾ ರೈ, ಕೀರ್ತಿಕಾ, ಪೃಥ್ವಿ ರೈ ಕೆ., ನೇತ್ರಾ ಎಂ.ಪಿ., ಯಶಸ್ವಿತಾ ಎನ್., ವಿಖ್ಯಾತ್, ಫಾತಿಮಾ ಅಝಿನಾ, ರಕ್ಷಾ ಪಿ., ತನುಷಾ ಕೆ.ಎಸ್. ಹಾಗೂ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಆಕಾಶ್ ಪಿ.ಜೆ., ಪಲ್ಲವಿ ಕೆ.ಬಿ., ಸಹನಾ ಕೆ.ಎಲ್., ಶ್ರಾವ್ಯಾ ಪಿ.ಡಿ. ರೈ, ಪ್ರಶಸ್ತಿ ರೈ, ಸುಮಿತ್ ರಾಜ್, ಯಶ ರೈ, ಹಿತಾಶ್ರೀ, ಅಮೃತಾ ಎ.ಪಿ., ಮಂಜುಶ್ರೀ, ವಾಣಿಜ್ಯ ವಿಭಾಗದಲ್ಲಿ ಸಂಪನ್ನಲಕ್ಷ್ಮೀ, ತೃಷಿಕಾ, ಕೀರ್ತನ್ ರೈ ಕೆ., ಆಧಿಶ್ರೀ ಕೆ., ಪ್ರಜ್ಞಾ, ಕೀರ್ತಿಕಾ ರೈ ಬಿ., ಪ್ರತೀಕ್ಷಾ ಎಂ., ಸಂಪ್ರೀತ್ ಬಿ.ಎಸ್. ಅವರನ್ನು ಸನ್ಮಾನಿಸಲಾಯಿತು.