ಪೂರ್ಣ ಕುಂಭೋತ್ಸವದ ಮೆರವಣಿಗೆ

12 GTL
Published on

ಗುತ್ತಲ: ಪಟ್ಟಣದ ಐತಿಹಾಸಿಕ ಶ್ರೀ ಹೇಮಗಿರಿ ಚನ್ನಬಸವೇಶ್ವರರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಪೂರ್ಣ ಕುಂಭೋತ್ಸವದ ಮೆರವಣಿಗೆ ಜರುಗಿತು.

ಬೆಳಗ್ಗೆ ಹೇಮಗಿರಿಮಠದಿಂದ ಸಮ್ಮಾಳ, ನಂದಿಕೋಲು, ಭಜನಾ ಮೇಳ ಸೇರಿ ಹಲವು ಮಂಗಳ ವಾದ್ಯಗಳೊಂದಿಗೆ ಹೊರಟ ಪೂರ್ಣ ಕುಂಭದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಶ್ರೀಮಠವನ್ನು ತಲುಪಿ ಸಂಪನ್ನಗೊಂಡಿತು. ಶ್ರೀ ಹೇಮಗಿರಿ ಅಜ್ಜನವರ ಪೂಜೆಯ ನಂತರ ನೂತನ ಕಲ್ಯಾಣ ಮಂಟಪದ ನಿವೇಶನದಲ್ಲಿ ಅನ್ನ ಸಂತರ್ಪಣೆ ಜರುಗಿತು.

ಮೆರವಣಿಗೆಯಲ್ಲಿ ನೂರಾರು ಮಹಿಳೆಯರು, ಮಕ್ಕಳು, ಶ್ರೀಮಠದ ಭಕ್ತರು, ಹೇಮಗಿರಿ ಚನ್ನಬಸವೇಶ್ವರರ ಶ್ರಾವಣ ಮಾಸದ ಪೂರ್ಣ ಕುಂಭೋತ್ಸವ ಸಮಿತಿಯ ಸದಸ್ಯರು, ಬನಶಂಕರಿ ಭಜನಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net