ಗಣಪತಿ ದೇಗುಲದಲ್ಲಿ ಕುಂಭಾಭಿಷೇಕ

oppo_2
oppo_2
Published on

ಹನೂರು: ತಾಲೂಕಿನ ಒಡೆಯರಪಾಳ್ಯ ಗ್ರಾಮದ ಶ್ರೀ ಗಣಪತಿ ದೇಗುಲದಲ್ಲಿ ಭಾನುವಾರ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಬಸವಣ್ಣ ಸ್ವಾಮೀಜಿ ಅವರ ನೇತೃತ್ವದಲ್ಲಿ ಕುಂಭಾಭಿಷೇಕ ನೆರವೇರಿಸಲಾಯಿತು.


ದೇಗುಲವನ್ನು ತಳಿರು-ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಶನಿವಾರ ಗಣಪತಿ ಹಾಗೂ ನಾಗರ ವಿಗ್ರಹ ಪ್ರತಿಷ್ಠಾಪಿಸಿ ಗಣಪತಿ ಪೂಜೆ, ಆಚಾರ್ಯ ಪೂಜೆ, ಪ್ರಧಾನ ಸಂಕಲ್ಪ ಸ್ವಸ್ತಿ ಪುಣ್ಯಹ ವಾಚನಂ, ಪಂಚಗವ್ಯ ವಿಧಿ, ಭೂತ ಶುದ್ಧಿ, ರಕ್ಷಾ ಸೂತ್ರ ಬಂಧನ, ಮಂಟಪ ಪೂಜಾ, ವಾಸ್ತು ಶಾಂತಿ, ಪ್ರಧಾನ ಕಳಸ ಸ್ಥಾಪನೆ ನೆರವೇರಿಸಲಾಗಿತ್ತು. ಭಾನುವಾರ ಬೆಳಗ್ಗೆ 5 ರಿಂದ 6 ರವರೆಗೆ ದೇಗುಲದಲ್ಲಿ ಉದಯ ಲಗ್ನ, ತತ್ವ ವಾಹನ, ಕಲಾ ವಾಹನ ಪ್ರಾಣ ಪ್ರತಿಷ್ಠಾಂಗ ಹೋಮ, ಪೂರ್ಣಾಹುತಿ ನಡೆಸಿ ಕಳಶಕ್ಕೆ ಕುಂಭಾಭಿಷೇಕ ನೆರವೇರಿಸಲಾಯಿತು. ಒಡೆಯರಪಾಳ್ಯ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಜನರು ಆಗಮಿಸಿದ್ದರು. ದೇಗುಲದ ವತಿಯಿಂದ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.


ಗೌಡಳ್ಳಿ ವಿರಕ್ತ ಮಠದ ತೋಂಟದಾರ್ಯ ಸ್ವಾಮೀಜಿ, ಕಾಮಗೆರೆ ಮಠದ ಶ್ರೀ ಮುಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಚಿಕ್ಕಿಂದುವಾಡಿ ಪಟ್ಟದ ಮಠದ ಬಾಲಷಡಕ್ಷರ ಸ್ವಾಮೀಜಿ, ಹೊಂಡರಬಾಳು ಶಂಕಿನ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾ ಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net