ಬೆಲೆ ಏರಿಕೆಯಲ್ಲಿ ಕೇರಳಕ್ಕೆ ಅಗ್ರಸ್ಥಾನ : ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಲೇವಡಿ

New Project (7)
Published on

ಬದಿಯಡ್ಕ: ಅಭಿವೃದ್ಧಿಯಲ್ಲಿ ಅಲ್ಲ, ಬೆಲೆ ಏರಿಕೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಇದು ಸಿಎಂ ಪಿಣರಾಯಿ ವಿಜಯನ್ ಕೊಡುಗೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಹೇಳಿದರು.

ಕುಂಬ್ಡಾಜೆ ಪಂಚಾಯಿತಿ ವ್ಯಾಪ್ತಿಯ ಏತಡ್ಕದಲ್ಲಿ ಇತ್ತೀಚೆಗೆ ಕುಂಬ್ಡಾಜೆ ಪಂಚಾಯಿತಿ ನಾಲ್ಕನೇ ವಾರ್ಡ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಕೇರ ನಾಡಾದ ಕೇರಳದಲ್ಲಿ ತೆಂಗಿನಕಾಯಿ ಬೆಲೆ ಸಾಮಾನ್ಯ ಜನರಿಗೆ ಕೈಗೆಟುಕುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಿಂದಾಗಿ, ಓಣಂ ಸಮಯದಲ್ಲಿ ಮಲಯಾಳಿಗಳಿಗೆ ನಿರಾಶದಾಯಕವಾಗಿದೆ. ಜನರ ತೆರಿಗೆ ಹಣವನ್ನು ಖರ್ಚು ಮಾಡುವ ಮೂಲಕ ಸ್ಥಳೀಯಾಡಳಿತ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ರಾಜಕೀಯ ಪ್ರಚಾರ ನಡೆಸಲು ನವ ಕೇರಳ ಸಮ್ಮೇಳನದ ಮಾದರಿಯಲ್ಲಿ ಸೆಪ್ಟೆಂಬರ್‌ನಲ್ಲಿ ಅಭಿವೃದ್ಧಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಅಶ್ವಿನಿ ಆರೋಪಿಸಿದರು.

ಕಳೆದ 5 ವರ್ಷಗಳ ಚಟುವಟಿಕೆಗಳನ್ನು ಬದಿಯಡ್ಕ ಮಂಡಲ ಉಪಾಧ್ಯಕ್ಷ ಮತ್ತು ವಾರ್ಡ್ ಜನಪ್ರತಿನಿಧಿ ಕೃಷ್ಣ ಶರ್ಮ ಪ್ರಸ್ತುತಪಡಿಸಿದರು. ವಾರ್ಡ್ ಸಂಚಾಲಕ ರಾಮಣ್ಣ ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ., ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಪಂಚಾಯಿತಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ಶೈಲಜಾ ಭಟ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net