ಧಾರ್ಮಿಕ ಕ್ಷೇತ್ರಗಳ ಮೇಲೆ ಆರೋಪದ ಹಿಂದೆ ಹುನ್ನಾರ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬು ರಾಜ್ ಆರೋಪ

New Project (3)
Published on

ಬದಿಯಡ್ಕ: ಹಿಂದು ಸಂಸ್ಕೃತಿಯನ್ನು ಹಾಳು ಮಾಡುವ ಉದ್ದೇಶದಿಂದ ಧರ್ಮಸ್ಥಳ ಸಹಿತ ಧಾರ್ಮಿಕ ಕ್ಷೇತ್ರಗಳ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದರ ಹಿಂದೆ ದೊಡ್ಡ ಹುನ್ನಾರವಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬು ರಾಜ್ ಹೇಳಿದರು.

ಕುಂಬ್ಡಾಜೆ ಪಂಚಾಯಿತಿ ಅಗಲ್ಪಾಡಿ ವಾರ್ಡ್ ಸಮಾವೇಶವನ್ನು ಪಡುಮೂಲೆಯಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸುಳ್ಳು ದೂರು ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಶಬರಿಮಲೆಯಲ್ಲೂ ಇದೇ ರೀತಿಯಲ್ಲಿ ಗಲಭೆ ಸೃಷ್ಟಿಸಿ ಹಿಂದುಗಳ ಧಾರ್ಮಿಕ ಭಾವನೆ ಹಾಳುಗೆಡಹುವ ಕೃತ್ಯ ನಡೆದಿತ್ತು. ಇದರ ಹಿಂದೆ ಸಿಪಿಎಂನ ಕೈವಾಡವಿದೆ ಎಂದು ಆರೋಪಿಸಿದರು.

ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಬಿಜೆಪಿ ನೇತಾರ ಹರ್ಷ ಕುಣಿಕ್ಕುಳ್ಳಾಯ ಹಾಗೂ ವಾರ್ಡು ಸದಸ್ಯೆ ಮೀನಾಕ್ಷಿ ಎಸ್. ಅವರನ್ನು ಗೌರವಿಸಲಾಯಿತು.

ವಾರ್ಡು ಸಂಚಾಲಕ ಅಂಬುಜಾಕ್ಷ ನಡುಮೂಲೆ ಉಪಸ್ಥಿತರಿದ್ದರು. ರಾವೇಂದ್ರ ಮೈಲೊತ್ತೊಟ್ಟಿ ಸ್ವಾಗತಿಸಿದರು. ವಾರ್ಡು ಸದಸ್ಯೆ ಮೀನಾಕ್ಷಿ ಎಸ್. ವರದಿ ಮಂಡಿಸಿದರು. ವಿದ್ಯಾಲಕ್ಷ್ಮೀ ರಾಷ್ಟ್ರಗೀತೆ ಹಾಡಿದರು. ಶಿವಾನಂದ ನಡುಮೂಲೆ ನಿರೂಪಿಸಿದರು. ಅನು ಕುರಪ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net