ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆ - ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ

PTR_3 FEB_2
Published on

ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಭಾಸ್ಕರ ಎಂ. ಪೆರುವಾಯಿ ಮತ್ತು ಉಪಾಧ್ಯಕ್ಷ ದಾಮೋದರ್ ಕುಲಾಲ್ ಅವರಿಗೆ ಅಭಿನಂದನೆ ಹಾಗೂ ಕುಲಾಲ ಸಹಕಾರ ಭವನದ ಮೇಲಂತಸ್ತಿನ ಸಭಾಂಗಣದ ಉದ್ಘಾಟನೆ ಸೋಮವಾರ ನಡೆಯಿತು.

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದಿನೇಶ್ ಪಿ.ವಿ.ಸಭಾಂಗಣ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ್ ಎಂ. ಪೆರುವಾಯಿ ವಹಿಸಿದ್ದರು.

ಕುಲಾಲ ಸಂಘದ ರವಿ ಕೈತ್ತಡ್ಕ, ತೇಜ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಗಣೇಶ್ ರಾವ್, ಕೊಂಬೆಟ್ಟು ಸರ್ಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ವಸಂತ ಮೂಲ್ಯ, ಉದ್ಯಮಿ ಸಂತೋಷ್ ರೈ ನಳಿಲು ಸಹಿತ ಹಲವು ಮಂದಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ವಕೀಲ ಉದಯರವಿ ಕುಂಬ್ಲಾಜೆ, ಬೆಳ್ಳಾರೆ ಸಂಘದ ಮಾಜಿ ಅಧ್ಯಕ್ಷ ರಾಮಣ್ಣ ಮೂಲ್ಯ, ಪುತ್ತೂರು ಕುಲಾಲ ಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್, ಕಾರ್ಯದರ್ಶಿ ರವಿ ಪಿ. ಕುಲಾಲ್, ಮಾಣಿ ಕುಲಾಲ ಸಂಘದ ಅಧ್ಯಕ್ಷ ಮೋಹನ್ ಕುಲಾಲ್, ವಿಟ್ಲ ಸಂಘದ ಅಧ್ಯಕ್ಷ ಬಾಬು ಬಿ.ಕೆ., ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನಿರ್ದೇಶಕ ಬಿ.ಎಸ್. ಕುಲಾಲ್, ಪದ್ಮಕುಮಾರ್ ಎಚ್., ನಾಗೇಶ್ ಕುಲಾಲ್, ಸೇಸಪ್ಪ ಕುಲಾಲ್, ಗಣೇಶ್ ಪಿ., ಪ್ರಶಾಂತ್ ಬಂಜನ್, ರಂಜಿತ, ರೇಖಾ ದಿನೇಶ, ಪೂವಪ್ಪ ಕಡಂಬಾರ್ ಉಪಸ್ಥಿತರಿದ್ದರು.

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ಜನಾರ್ದನ ಮೂಲ್ಯ ಸ್ವಾಗತಿಸಿದರು. ಉಪಪ್ರಧಾನ ವ್ಯವಸ್ಥಾಪಕಿ ಸುಜಾತ ವಂದಿಸಿದರು.

ಸಂಘದ ಶಾಖೆಯನ್ನು ೨೫ಕ್ಕೆ ಏರಿಸುವ ಗುರಿಯನ್ನು ಹೊಂದಿದ್ದು, ೧೦೦ ಮಂದಿಗೆ ಉದ್ಯೋಗ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಸಂಘದ ಸಭಾಂಗಣ ಮುಂದಿನ ದಿನಗಳಲ್ಲಿ ಕುಂಬಾರರ ಸಂಘದ ಬಂಧುಗಳಿಗೆ ಹಾಗೂ ಸಹಕಾರ ಸಂಘದ ಸದಸ್ಯರಿಗೆ ಉಚಿತವಾಗಿ ನೀಡಲಾಗುವುದು.

| ಭಾಸ್ಕರ್ ಎಂ. ಪೆರುವಾಯಿ

ಅಧ್ಯಕ್ಷರು, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net