ಕುಮಟಾ ತಾಲೂಕು ಮಟ್ಟದ ಈಜು ಸ್ಪರ್ಧೆ

30-kmt- swimming
Published on

ಕುಮಟಾ: ಪಟ್ಟಣದ ಚಿತ್ರಿಗಿ ವಿಷ್ಣುತೀರ್ಥದಲ್ಲಿ ಭಾನುವಾರ ದಿ. ಮೋಹನ ಕೆ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರೋಟರಿ ಕ್ಲಬ್ ಸಹಯೋಗದಲ್ಲಿ ತಾಲೂಕು ಮಟ್ಟದ ಈಜು ಸ್ಪರ್ಧೆ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಿ. ಮೋಹನ ಶೆಟ್ಟಿ ಟ್ರಸ್ಟ್ ಅಧ್ಯಕ್ಷ ರವಿಕುಮಾರ ಶೆಟ್ಟಿ, ಈ ಭಾಗದ ಈಜುಗಾರರು ರಾಜ್ಯಮಟ್ಟದಲ್ಲಿ ಮಿಂಚಬೇಕು ಎಂಬ ದೂರದೃಷ್ಟಿ ಹೊಂದಿದ್ದ ನಮ್ಮ ತಂದೆ ಮಾಜಿ ಶಾಸಕ ಮೋಹನ ಕೆ. ಶೆಟ್ಟಿ ಅವರು, ರೋಟರಿ ಸಹಯೋಗದೊಂದಿಗೆ ಹಾಕಿಕೊಟ್ಟ ಈಜು ಸ್ಪರ್ಧೆ ಈವತ್ತಿಗೂ ಮುಂದುವರಿದಿದೆ ಎಂದರು.
ಎಸಿಎಫ್ ಲೋಹಿತ್ ಜಿ., ಕಾರ್ಯಕ್ರಮದ ಸಂಯೋಜಕ ಕಿರಣ ನಾಯಕ, ಸಂದೀಪ ನಾಯಕ, ಸತೀಶ ನಾಯ್ಕ, ಸುರೇಶ ಭಟ್, ಚೇತನ್ ಶೇಟ್, ಅತುಲ್ ಕಾಮತ, ಜಯಶ್ರೀ ಕಾಮತ, ಪವನ ಶೆಟ್ಟಿ, ಹರೀಶ ಹೆಗಡೆ, ಡಾ. ಸಚಿನ್ ನಾಯಕ, ಡಾ. ಆಜ್ಞಾ ನಾಯಕ, ಎಸ್.ಕೆ. ಹೆಗಡೆ, ವಸಂತ ಶಾನಭಾಗ, ಡಾ. ವನಮಾಲಾ ಶಾನಭಾಗ, ನಿಖಿಲ್ ಕ್ಷೇತ್ರಪಾಲ, ಗಣೇಶ ನಾಯ್ಕ, ವಿನಯ ನಾಯಕ ಇದ್ದರು. ಗಣಪತಿ ಸಿ. ಪಟಗಾರ ಮುಖ್ಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ರೋಟರಿ ಅಧ್ಯಕ್ಷ ಎನ್.ಆರ್. ಗಜು ಸ್ವಾಗತಿಸಿದರು. ವಿನಾಯಕ ಬಾಳೇರಿ ನಿರೂಪಿಸಿದರು. ಕಾರ್ಯದರ್ಶಿ ರಾಮದಾಸ ಗುನಗಿ ವಂದಿಸಿದರು.
ಸ್ಪರ್ಧಾ ವಿಜೇತರು: ಕಿರಿಯ ಪ್ರಾಥಮಿಕ ಬಾಲಕರು: ನಮನ ಹರಿಕಾಂತ ಪ್ರಥಮ, ಸುಬ್ರಹ್ಮಣ್ಯ ಶಾಸ್ತ್ರೀ ದ್ವಿತೀಯ, ಶೌರ್ಯ ಎಸ್. ಹಾಗೂ ಆದಿತ್ಯ ಭಂಡಾರಿ ತೃತೀಯ. ಬಾಲಕಿಯರು: ತಾನ್ವಿ ಪಟಗಾರ ಪ್ರಥಮ, ಅದಿತಿ ಗೋಕರ್ಣ, ಬಿಜಿಎಸ್ ಮಿರ್ಜಾನ್ ದ್ವಿತೀಯ, ಲಹರಿ ಪಟಗಾರ ತೃತೀಯ.
ಹಿರಿಯ ಪ್ರಾಥಮಿಕ ಬಾಲಕರು: ಅರ್ಜುನ್ ಶಾನಭಾಗ ಪ್ರಥಮ, ಅನ್‌ಮೋಲ್ ಎಸ್. ನಾಯ್ಕ ದ್ವಿತೀಯ, ವಿಷ್ಣು ಅತುಲ್ ಕಾಮತ ತೃತೀಯ. ಬಾಲಕಿಯರು: ಶುಭಾಂಗಿ ಮಂಕೀಕರ, ಬಿಜಿಎಸ್ ಮಿರ್ಜಾನ್ (ಪ್ರಥಮ), ದೃಷ್ಟಿ ಬಾಳಗಿ ದ್ವಿತೀಯ, ರೀಷಾ ನಾಯಕ, ತೃತೀಯ.
ಪ್ರೌಢಶಾಲಾ ಬಾಲಕರು: ಸುಯೋಗ ದಾಮೋದರ ಶೆಟ್ಟಿ ಪ್ರಥಮ, ಕಾರ್ತಿಕ ಗಣಪತಿ ವೆಂಗುರ್ಲೆಕರ ದ್ವಿತೀಯ, ಈಶಾನ್ ರವೀಂದ್ರ ನಾಯ್ಕ ತೃತೀಯ. ಬಾಲಕಿಯರು: ಶ್ರದ್ಧಾ ವೆರ್ಣೇಕರ ಪ್ರಥಮ, ಪೂರ್ವಿ ಶಾನಭಾಗ ದ್ವಿತೀಯ, ಆಧ್ಯಾ ಲೋಹಿತ ತೃತೀಯ.
ಕಾಲೇಜು ವಿಭಾಗ ಬಾಲಕರು : ಸ್ವಯಂ ಪೈ ಪ್ರಥಮ, ರಾಘವೇಂದ್ರ ನಾಯ್ಕ ದ್ವಿತೀಯ, ಕೃಷ್ಣ ಡಿ.ಎಚ್., ತೃತೀಯ. ಬಾಲಕಿಯರು: ಅಕ್ಷತಾ ದೇಶಭಂಡಾರಿ ಪ್ರಥಮ, ಶ್ರೇಯಾ ಆರ್. ನಾಯ್ಕ ದ್ವಿತೀಯ, ಶರಧಿ ದಿವಾನ ತೃತೀಯ.
40 ವರ್ಷದ ಕೆಳಗಿನವರು: ಕರುಣ ಹರಿಕಾಂತ ಪ್ರಥಮ, ಕೃಷ್ಣ ಧಾರೇಶ್ವರ ದ್ವಿತೀಯ, ಪೃಥ್ವಿರಾಜ ನಾಯ್ಕ ತೃತೀಯ.
40-60 ವರ್ಷದೊಳಗಿನ ಸಾರ್ವಜನಿಕರು: ಗಣೇಶ ಬಾಳಗಿ ಪ್ರಥಮ, ಸದಾನಂದ ಹರಿಕಂತ್ರ ದ್ವಿತೀಯ, ಧರ್ಮೇಂದ್ರ ನಾಯ್ಕ ತೃತೀಯ. ಮಹಿಳೆಯರ ಮುಕ್ತ ಸ್ಪರ್ಧೆ: ಸ್ವಾತಿ ಪೈ ಪ್ರಥಮ, ಶಿಫಾಲಿ ಕಾಮತ ದ್ವಿತೀಯ, ಪಲ್ಲವಿ ಪ್ರಭು ಮತ್ತು ಪಲ್ಲವಿ ಶೆಟ್ಟಿ ತೃತೀಯ ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net