

ಹಾನಗಲ್ಲ: ಕರ್ನಾಟಕ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಪುರುಷರ ಪ್ರಥಮ ವಲಯ ಅಂತರ ಕಾಲೇಜ್ ಕಬಡ್ಡಿ ಪಂದ್ಯಾವಳಿಯಲ್ಲಿ ಪಟ್ಟಣದ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಚಾಂಪಿಯನ್ ಆಗಿದೆ.
ಕಬಡ್ಡಿ ತಂಡದ ಕ್ಯಾಪ್ಟನ್ ಬಿ.ಕೆ. ಪ್ರಜ್ವಲ್ ನೇತೃತ್ವದಲ್ಲಿ, ಕೋಟೇಶ ಪವಾಡಿ, ಪ್ರವೀಣ ಮರಗೂರ, ವಿಜಯಕುಮಾರ್ ಸಿಂಗ್, ಶಿವರಾಜ ತೊಂಡೂರ, ಪ್ರಶಾಂತ ಲಕಮಾಪುರ, ಶಿವರಾಜ್ ಕನ್ನೇಶ್ವರ, ಭರತ್ ಬೊಮ್ಮನಹಳ್ಳಿ, ಮಲ್ಲಿಕರೆಹಾನ್ ಶೇಖ್, ಆಂಜನೇಯ ಶಿಡೇನೂರ, ಆದರ್ಶ ಹೊತ್ತಗಿ, ಮಂಜುನಾಥ ಹುಲಮನಿ, ಕಿರಣ ನಾಗಮ್ಮನವರ ತಂಡದಲ್ಲಿದ್ದರು.
ಪ್ರವೀಣ ಮರಗೂರ ಬೆಸ್ಟ್ ಆಲ್ ರೌಂಡರ್ ಆಫ್ ಟೂರ್ನಾಮೆಂಟ್, ಶಿವರಾಜ ಕನ್ನೇಶ್ವರ ಬೆಸ್ಟ್ ಕ್ಯಾಚರ್ ಆಫ್ ಟೂರ್ನಾಮೆಂಟ್ ಆಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಡಾ. ಬಸನಗೌಡ ಲಕ್ಷೆ್ಮೕಶ್ವರ ತರಬೇತಿ ನೀಡಿದ್ದಾರೆ.