

ಕಡೂರು: ತಾಲೂಕಿನ ಚೌಳಹಿರಿಯೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಎನ್.ಕುಮಾರಸ್ವಾಮಿ, ಉಪಾಧ್ಯಕ್ಷೆಯಾಗಿ ಪಾರ್ವತಮ್ಮ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ನೂತನ ಆಡಳಿತ ಮಂಡಳಿ ರಚನೆಯಲ್ಲಿ ಒಗ್ಗಟ್ಟಿನೊಂದಿಗೆ ನಿರ್ದೇಶಕರು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಬೆಂಬಲಿಸಿದರು. ಸಹಕಾರ ಸಂಘದ ಅಧಿಕ್ಷಕ ಕಲ್ಲೇಶಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಅಭಿನಂದನಾ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶೆಟ್ಟಿಹಳ್ಳಿ ರಾಮಜ್ಜ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರೈತರ ಅಭಿವೃದ್ಧಿಗೆ ಪೂರಕವಾಗಿ ನೂತನ ಆಡಳಿತ ಮಂಡಳಿ ಶ್ರಮಿಸಬೇಕು ಎಂದು ಆಶಿಸಿದರು.
ನೂತನ ಅಧ್ಯಕ್ಷ ಎಚ್.ಎನ್. ಕುಮಾರಸ್ವಾಮಿ ಮಾತನಾಡಿ, ನಿರ್ದೇಶಕರ ಒಕ್ಕೂರಲ ತಿರ್ಮಾನದೊಂದಿಗೆ ಅವಿರೋಧವಾಗಿ ಆಯ್ಕೆಗೊಳ್ಳಲು ಸಹಕಾರಿಯಾಯಿತು. ಎಲ್ಲರ ವಿಶ್ವಾಸದೊಂದಿಗೆ ಸಂಘದ ಪ್ರಗತಿಗೆ ಹೆಚ್ಚು ಒತ್ತು ಕೊಟ್ಟು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.
ನಿರ್ದೇಶಕರಾದ ಎಚ್.ಎನ್.ಜಗದೀಶ್, ಎಚ್.ಎನ್.ಪ್ರಸನ್ನ ಕುಮಾರ್, ಕೆ.ಒ.ಬಸರಾಜ್, ಮಲ್ಲೇಗೌಡ, ಸುಂದರೇಶ್, ಮಲ್ಲಿಕಾರ್ಜುನ, ದೇವೆಂದ್ರಪ್ಪ, ಬಿ.ಪಿ.ಆಶಾ ಶಿವಕುಮಾರ್, ಸೋಮಶೇಖರ್, ರತ್ನಮ್ಮ ಹಾಗೂ ಗ್ರಾಮದ ಮುಖಂಡರಾದ ಚನ್ನಮಲ್ಲಪ್ಪ, ಓಂಕಾರಪ್ಪ, ಶಿವಶಂಕರ್, ಸಂದೀಪ್, ಜಯಣ್ಣ, ಗಾಡಿ ಮಲ್ಲೇಶಪ್ಪ, ಚಂದ್ರಶೇಖರ್, ಸಂಘದ ಕಾರ್ಯದರ್ಶಿ ಚಿದಾನಂದ್ ಮತ್ತಿತರಿದ್ದರು.