ಕುಮಾರಪಟ್ಟಣ ಬಳಿ ಬೈಕ್‌ನಿಂದ ಬಿದ್ದು ಸವಾರ ಸಾವು

Bike Accident_2
Published on

ರಾಣೆಬೆನ್ನೂರ: ಬೈಕ್‌ನಿಂದ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಹರಿಹರ ನಗರದ ವಿಜಯಕುಮಾರ ಮಹಲಿಂಗಪ್ಪ ಬೆಣ್ಣಿ (43) ಮೃತ ಬೈಕ್ ಸವಾರ.
ಈತ ಕುಮಾರಪಟ್ಟಣದಿಂದ ಹರಿಹರ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net