ಬಳ್ಳಾರಿಗೆ ಮೊಳಕಾಲ್ಮೂರನ್ನು ಸೇರಿಸಲು ಒತ್ತಾಯ

IMG_20201121_120341.jpg nn
Published on

ಚಿತ್ರದುರ್ಗ: ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರನ್ನು ಸೇರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ವಕೀಲ ಕುಮಾರ ಗೌಡ ಒತ್ತಾಯಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಬಳ್ಳಾರಿಯನ್ನು ವಿಭಜಿಸಿ ಹೊಸದಾಗಿ ವಿಜಯ ನಗರ ಜಿಲ್ಲೆಯ ರಚನೆಗೆ ಮುಂದಾಗಿದೆ.

ಹೊಸ ಜಿಲ್ಲೆ ರಚನೆಯಾದರೆ 105 ಹಳ್ಳಿಗಳನ್ನೂ ಒಳಗೊಂಡಂತೆ ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿಗೆ ಸೇರಿಸಬೇಕು. ಈ ಸಂಬಂಧ ಜಿಲ್ಲಾ ಉಸ್ತು ವಾರಿ ಸಚಿವ ಬಿ.ಶ್ರೀರಾಮುಲು ಹಾಗೂ ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಕೃಷ್ಣರ ಜತೆ ಚರ್ಚಿಸಲಾಗುವುದು. ಮೊಳ ಕಾಲ್ಮೂರಲ್ಲಿ ಸಭೆ ಕರೆದು ತಾಲೂಕಿನ ಜನರ ಅಭಿಪ್ರಾಯವನ್ನೂ ಸಂಗ್ರಹಿಸಲಾಗುವುದು. ಡಿಸೆಂಬರ್‌ನಲ್ಲಿ ಹೋರಾಟ ಸಮಿತಿ ರಚಿಸಿ ಮುಖ್ಯ ಮಂತ್ರಿ ಬಳಿ ನಿಯೋಗ ಕೊಂಡೊಯ್ಯಲಾಗುವುದು. ಅಗತ್ಯಬಿದ್ದರೆ ಪಟ್ಟಣ ಬಂದ್ ಕರೆ ಸಹಿತ ಹೋರಾಟ ತೀವ್ರಗೊಳಿಸಲಾಗುವುದು ಎಂದ ಅವರು,ಚಿತ್ರದುರ್ಗಕ್ಕಿಂತ ಹತ್ತಿರವಿರುವ ಬಳ್ಳಾರಿಗೆ ಮೊಳಕಾಲ್ಮೂರನ್ನು ಸೇರಿಸುವುದು ಸೂಕ್ತ ವೆಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net