ಕುಮಾರ ಶ್ರೀಗಳ ಮಹಿಮೆ ಅಪಾರ

14KOLAVI1
Published on

ಕೊಳವಿ: ಹೂಲಿಕಟ್ಟಿ ಗ್ರಾಮದ ಹೊರವಲಯದ ಸ್ಮಶಾನಭೂಮಿಯಲ್ಲಿ ಪೂಜ್ಯಕುಮಾರ ಶ್ರೀಗಳು ನಿರಂತರ ಮೂರು ತಿಂಗಳವರೆಗೆ ಅನುಷ್ಠಾನ ಮಾಡಿ, ಈ ಕಲ್ಲು ಪ್ರದೇಶವನ್ನು ಪುಣ್ಯಕ್ಷೇತ್ರವನ್ನಾಗಿಸಿದ್ದಾರೆ. ಅವರ ಮಹಿಮೆ ಅಪಾರ ಎಂದು ಘಟಪ್ರಭಾದ ವಿರೂಪಾಕ್ಷ ಸ್ವಾಮೀಜಿ ಹೇಳಿದರು.

ಸಮೀಪದ ಹೂಲಿಕಟ್ಟಿ ಗ್ರಾಮದ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಹಾಗೂ ಧರ್ಮಸಭೆಯಲ್ಲಿ ಮಾತನಾಡಿದರು.

ಪ್ರವಚನಕಾರ ಗದಗದ ಸಿದ್ಧಲಿಂಗಯ್ಯ ಶಾಸ್ರಿ, ಮಕರ ಸಂಕ್ರಮಣ ದಿನದಂದು ಶ್ರೀಗಳ ದರ್ಶನ ಪಡೆದರೆ ಹಿಂದೆ ಮಾಡಿದ ಪಾಪದ ಕಾರ್ಯಗಳು ದೂರವಾಗುತ್ತವೆ. ಮಾನವನ ಜನ್ಮ ದೊಡ್ಡದು. ಹಾಗಾಗಿ ದಾನ ಧರ್ಮ ಪರೋಪಕಾರ ಮಾಡುತ್ತಿರಬೇಕು. ಆಗ ಜೀವನಕ್ಕೆ ಒಂದು ಅರ್ಥ ಕಲ್ಪಿಸುತ್ತದೆ ಎಂದರು.

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾತ್ರೆ ನಿಮಿತ್ತ ಶಿವಲಿಂಗೇಶ್ವರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಮಹಾ ಮಂಗಳಾರತಿ ನೆರವೇರಿತು. ಗ್ರಾಮದ ಲಕ್ಷ್ಮೀ ದೇವಸ್ಥಾನದಿಂದ ಶಿವಲಿಂಗೇಶ್ವರ ಮಠದವರೆಗೆ ಸಕಲವಾದ್ಯ ಮೇಳದೊಂದಿಗೆ ಕುಂಭಮೇಳ ಹಾಗೂ ಪಲ್ಲಕ್ಕಿ ಉತ್ಸವ ಜರುಗಿತು.

ಸಾಧಕರನ್ನು ಸನ್ಮಾನಿಸಲಾಯಿತು. ಬಾಗೋಜಿಕೊಪ್ಪದ ಗುರುಪಾದ ಸ್ವಾಮೀಜಿ ನಿರೂಪಿಸಿದರು. ಜಿಪಂ ಮಾಜಿ ಸದಸ್ಯರಾದ ಟಿ.ಆರ್. ಕಾಗಲ, ಮಡ್ಡೆಪ್ಪ ತೋಳಿನವರ, ಮುಖಂಡರಾದ ಸುರೇಶ ಸನದಿ, ಗ್ರಾಪಂ ಅಧ್ಯಕ್ಷ ಕರೆಪ್ಪ ಬಡಿಗವಾಡ, ಮಾಜಿ ಅಧ್ಯಕ್ಷ ಸಿದ್ದಪ್ಪ ಸಿಂಗಮನವರ, ಗುತ್ತಿಗೆದಾರ ಅಶೋಕ ಗೋಣಿ, ಲಕ್ಕಪ್ಪ ಮಾಳಗಿ, ಮುತ್ತೆಪ್ಪ ಬೀರನಗಡ್ಡಿ, ಬಾಳಪ್ಪ ಕಂಕಣವಾಡಿ, ಯಲ್ಲಪ್ಪ ಗೋಣಿ, ಬಸಪ್ಪ ನಾಗನೂರ, ರಾಮಣ್ಣ ಖಾನಾಪುರ, ಕಲ್ಲಪ್ಪ ಹಿರಟ್ಟಿ, ವಿನೋದ ಗ್ಯಾನಪ್ಪನವರ ಹಾಗೂ ಸುತ್ತಮುತ್ತಲಿನ ಗ್ರಾಮದ ಗುರುಹಿರಿಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net