ಕರ್ತವ್ಯ ಲೋಪ, ಪಿಡಿಒ ಅಮಾನತು

suspended
Published on

ಅಕ್ಕಿಆಲೂರ: ಅಕ್ರಮ ಹಣ ವರ್ಗಾವಣೆ, ಗ್ರಾಮ ಮತ್ತು ವಾರ್ಡ್​ ಸಭೆ ನಡೆಸದ ಹಿನ್ನೆಲೆಯಲ್ಲಿ ಸ್ಥಳಿಯ ಗ್ರಾಪಂ ಪಿಡಿಒ ಕುಮಾರ ಮಕರವಳ್ಳಿ ಅಮಾನತುಗೊಳಿಸಿ ಜಿಪಂ ಸಿಇಒ ರುಚಿ ಬಿಂದಲ್​ ಆದೇಶಿಸಿದ್ದಾರೆ. ಪಟ್ಟಣದ ಮನೆಮನೆಗೆ ಇ&ಸ್ವತ್ತು ನಂಬರ್​ ಇರುವ ಪ್ಲೇಟ್​ ಅಳವಡಿಸಲು ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗಿದೆ. ನಿಯಮಾನುಸಾರ ವಾರ್ಡ್​ ಮತ್ತು ಗ್ರಾಮಸಭೆ ನಡೆಸಲಾಗುತ್ತಿಲ್ಲ ಎಂದು ಪಟ್ಟಣದ ನಿವಾಸಿ ಎಸ್​.ಕೆ ಬೆಲ್ಲದ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಖಾಸಗಿ ಸಂಸ್ಥೆಗೆ ಅವಕಾಶ ಕೊಟ್ಟು ಪಟ್ಟಣದ ಪ್ರತಿ ಮನೆಗೂ ಇ&ಸ್ವತ್ತಿನ ನಂಬರ್​ ಪ್ಲೇಟ್​ ಅಳವಡಿಸಲು ಸಾರ್ವಜನಿಕರಿಂದ 100 ರೂ. ಪಡೆಯಲಾಗುತ್ತಿದೆ ಎಂದು ವ್ಯಾಪಕ ಆರೋಪ ಕೇಳಿ ಬಂದಿತ್ತು. ಅಲ್ಲದೇ, ಗ್ರಾಪಂ ಆಡಳಿತದಲ್ಲಿ ಹೆಚ್ಚುವರಿ ಬಿಲ್​ ಹಚ್ಚಿ ಅಕ್ರಮವಾಗಿ ಹಣ ಪಡೆದು ಭ್ರಷ್ಟಾಚಾರ ನಡೆಸಲಾಗುತ್ತಿದೆ. ಅವಧಿ ಮೀರಿದರೂ ಸಂತೆ ಟೆಂಡರ್​ ಕರೆಯುತ್ತಿಲ್ಲ ಎಂದು ಗ್ರಾಪಂ ಸದಸ್ಯರು ಆರೋಪಿಸುತ್ತಿದ್ದರು. ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ ಅಧಿಕಾರಿಗಳು ಪಂಚಾಯತ್​ ರಾಜ್ಯ ವ್ಯವಸ್ಥೆಗೆ ಅನುಗುಣವಾಗಿ ಪಿಡಿಒ ಕಾರ್ಯನಿರ್ವಹಿಸಿಲ್ಲ. ಅಧಿಕಾರಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅ.27ರಂದು ಜಿಪಂ ಸಿಇಒ ರುಚಿ ಬಿಂದಲ್​ ಆದೇಶ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net