ಸೊರಬ ಅಭಿವೃದ್ಧಿಗೆ ಕುಮಾರ್ ಬಂಗಾರಪ್ಪ ಅವಿರತ ಶ್ರಮ

28sor1
ಸೊರಬದ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರ 60ನೇ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿ ಬಳಗದ ಪದಾಧಿಕಾರಿಗಳು ಕೇಕ್ ಕತ್ತರಿಸಿದರು. ಎಂ.ಡಿ.ಉಮೇಶ್, ಪ್ರಕಾಶ್ ತಲಕಾಲಕೊಪ, ಕಡಸೂರು ಶಿವಕುಮಾರ್, ಮಲ್ಲಿಕಾರ್ಜುನ ವೃತ್ತಿಕೊಪ್ಪ ಇತರರಿದ್ದರು.
Published on

ಸೊರಬ: ಕುಮಾರ್ ಬಂಗಾರಪ್ಪ ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ತಾಲೂಕಿನ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ತರುವಲ್ಲಿ ಶ್ರಮಿಸಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಡಿ.ಉಮೇಶ್ ಹೇಳಿದರು.

ಗುರುವಾರ ಪಟ್ಟಣದ ತಾಲೂಕು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕುಮಾರ್ ಬಂಗಾರಪ್ಪ ಅವರ 60ನೇ ವರ್ಷದ ಜನ್ಮದಿನಾಚರಣೆಯಲ್ಲಿ ಮಾತನಾಡಿ, ತಮ್ಮ ನೇರ, ನಿಷ್ಠುರ ನುಡಿಯ ಮೂಲಕ ಸಾರ್ವಜನಿಕ ಜೀವನದಲ್ಲಿ ಬಡವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಮುಂಚೂಣಿಯಲ್ಲಿದ್ದವರು ಕುಮಾರ್. ಅಂತಹ ನಾಯಕನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ತಿಳಿಸಿದರು.
ಕಳೆದ ಅವಧಿಯಲ್ಲಿ 2 ಸಾವಿರ ಕೋಟಿ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮೂಡಿ, ಮೂಗೂರು ಏತ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ. 2 ಸಾವಿರ ಕೋಟಿ ರೂ. ಅನುದಾನದಲ್ಲಿ ಸುಮಾರು 500 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಅನುದಾನ ವಾಪಸ್ ಹೋಗದಂತೆ ವಿವಿಧ ಕಾಮಗಾರಿಗಳ ನಿರ್ಮಾಣಕ್ಕೆ ಸಚಿವರು ಮುಂದಾಗುವಂತೆ ತಿಳಿಸಿದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮಾತನಾಡಿ, ಸಂಘಟನಾತ್ಮಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವಲ್ಲಿ ನಾವು ಸೋತಿದ್ದೇವೆ ಎಂಬ ಪಾಪಪ್ರಜ್ಞೆ ನಮ್ಮನ್ನು ಕಾಡುತ್ತಿದೆ. ವ್ಯಕ್ತಿಗತ ವಿರೋಧದಿಂದ ಕುಮಾರ್ ಬಂಗಾರಪ್ಪ ಅವರಿಗೆ ಸೋಲಾಯಿತು. ಸಂಘಟನೆ ಮೂಲಕ ವೈಯಕ್ತಿಕ ಲಾಭ ಪಡೆಯಲು ಮುಂದಾಗಬಾರದು. ಯಾರೂ ಪರಿಪೂರ್ಣರಲ್ಲ. ಕುಮಾರ್ ಬಂಗಾರಪ್ಪ ನಾಯಕತ್ವದಲ್ಲಿ ಪಕ್ಷ ಬಲಪಡಿಸಲು ಸಂಘಟಿತರಾಗಬೇಕು ಎಂದು ತಿಳಿಸಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಾಗೂ ಹೊಸಪೇಟೆ ಹಕ್ಕಲು ಡಾವಣೆಯಲ್ಲಿರುವ ಬುದ್ಧಿಮಾಂಧ್ಯ ಮಕ್ಕಳ ಶಾಲೆಯಲ್ಲಿ ಹಣ್ಣು, ಬ್ರೆಡ್ ವಿತರಿಸಲಾಯಿತು. ಪಕ್ಷದ ಹಿರಿಯ ನಾಯಕರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಕಡಸೂರು ಶಿವಕುಮಾರ್, ಮಲ್ಲಿಕಾರ್ಜುನ ವತ್ತಿಕೊಪ್ಪ, ಕೆ.ಜಿ.ಬಸವರಾಜ್ ಕೊಡಕಣಿ, ದೇವೇಂದ್ರಪ್ಪ ಪರಶುರಾಮಪ್ಪ, ಅಮಿತ್ ಗೌಡ, ಮಧುರಾಯ್ ಶೇಟ್, ಗುರುಕುಮಾರ್ ಪಾಟೀಲ್, ಕೃಷ್ಣಮೂರ್ತಿ, ನಾಗರಾಜ್ ಬರಗಿ, ಟಿ.ಆರ್. ಸುರೇಶ್, ಸದಾನಂದ, ಸೋಮಶೇಖರ್ ಬದರವಳ್ಳಿ, ಅಶೋಕ್ ಶೇಟ್, ಇಸೂಬ್‌ಸಾಬ್, ಸಂದೀಪ್, ಗುರುಮೂರ್ತಿ, ವಿರೂಪಾಕ್ಷಪ್ಪ ಜಡೆ, ಪ್ರಕಾಶ್, ಅಕ್ಬರ್ ಸಾಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net