ಕುಳೂರಿನ ಶಾಲಾ ಮಕ್ಕಳ ಬಯಲು ಪ್ರವಾಸ

bayalu
ಕುಳೂರು ಶಾಲಾ ವಿದ್ಯಾರ್ಥಿಗಳ ಬಯಲು ಪ್ರವಾಸ.
Published on

ಮಂಜೇಶ್ವರ: ಮಕ್ಕಳಲ್ಲಿ ಕೃಷಿಯ ಕುರಿತು ಆಸಕ್ತಿ ಮೂಡಿಸಲು ಹಾಗೂ ಕೃಷಿ ವಿಧಾನಗಳ ಕುರಿತು ತಿಳಿಯಲು ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಯಲು ಪ್ರವಾಸ ಕೈಗೊಂಡರು. ಕುಳೂರಿನ ಪ್ರಗತಿಪರ ಕೃಷಿಕ ಹಾಗೂ ಪಾರಂಪರ್ಯ ಕೃಷಿ ವಿಧಾನ ಅಳವಡಿಸಿ ಮುಂದುವರಿಯುತ್ತಿರುವ ಪಿ.ಆರ್.ಶೆಟ್ಟಿ ಪೊಯ್ಯೇಲು ಅವರ ಕೃಷಿ ಜಮೀನಿಗೆ ಶಾಲಾ ವಿದ್ಯಾರ್ಥಿಗಳು ಭೇಟಿ ನೀಡಿ ಭತ್ತ, ಅಡಕೆ, ತೆಂಗು, ತರಕಾರಿ ಹಾಗೂ ಹಣ್ಣು ಹಂಪಲುಗಳ ಕೃಷಿ ವಿಧಾನಗಳ ಬಗ್ಗೆ ತಿಳಿದುಕೊಂಡರು. ಜತೆಗೆ ಗದ್ದೆಗೆ ಇಳಿದು ನೇಜಿ ನೆಡುವ ಮೂಲಕ ನೈಜ ಅನುಭವ ಪಡೆದರು. ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಈ ಬಯಲು ಪ್ರವಾಸ ಸಂಘಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net