ನೀರಿನ ಪೈಪ್ ದುರಸ್ತಿ ಕಾಮಗಾರಿ ಕೂಳೂರು ದಿನವಿಡೀ ವಾಹನ ದಟ್ಟಣೆ

IMG_20220717_172532
Published on


ಮಂಗಳೂರು:  ಕೂಳೂರು ಸೇತುವೆ ಬಳಿ ಭಾನುವಾರ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ ಕಾಮಗಾರಿ ಹಮ್ಮಿಕೊಂಡ ಕಾರಣ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದಿನವಿಡೀ ವಾಹನ ದಟ್ಟಣೆ ಕಂಡು ಬಂತು.
ಕೊಟ್ಟಾರದಿಂದಲೇ ವಾಹನ ದಟ್ಟಣೆ ಕಂಡು ಬಂದಿದ್ದು, ಕೊಟ್ಟಾರದಿಂದ ಕೂಳೂರು ಸೇತುವೆ ತಲುಪಲು 20 ನಿಮಿಷ ತೆಗೆದುಕೊಂಡಿದೆ ಎಂದು ಕಾರು ಚಾಲಕರೊಬ್ಬರು ತಿಳಿಸಿದರು.  
ಕೂಳೂರು ಜಂಕ್ಷನ್ ಬಳಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಲಾರಿ, ಬಸ್ ಸೇರಿದಂತೆ ಘನ ವಾಹನಗಳನ್ನು ಸರ್ವಿಸ್ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಲಘು ವಾಹನಗಳಿಗಳು ನೇರವಾಗಿ ಸಂಚರಿಸಿದವು. ಸೇತುವೆಯಲ್ಲೂ ರಸ್ತೆ ಹದಗೆಟ್ಟ ಕಾರಣ ವಾಹನಗಳ ಸಂಚಾರ ಮತ್ತಷ್ಟು ನಿಧಾನ ಗತಿಯಲ್ಲಿ ಸಾಗಿತು. ಇದರಿಂದ ತುರ್ತು ತೆರಳುವವರಿಗೆ ಅಡಚಣೆ ಉಂಟಾಯಿತು.
ಕಾಮಗಾರಿ ಸೋಮವಾರ ಬೆಳಗ್ಗೆಯೊಳಗೆ ಪೂರ್ಣಗೊಳ್ಳಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದು, ಇಲ್ಲದಿದ್ದರೆ ಸೋಮವಾರ ಬೆಳಗ್ಗೆಯಿಂದ ಮತ್ತಷ್ಟು ವಾಹನ ದಟ್ಟಣೆ ಉಂಟಾಗಿ, ಸಾರ್ವಜನಿಕರು ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ. ನಿರಂತರ ಮಳೆ ಬಂದರೆ ದುರಸ್ತಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net