ಕುಲಗೋಡ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ

6
ಕುಲಗೋಡ ಪಿಕೆಪಿಎಸ್‌ಗೆ ಅಧ್ಯಕ್ಷೆಯಾಗಿ ಶಾಂತವ್ವ ಬೆಳಗಲಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಮಣ್ಣ ಕುರಬಚನ್ನಾಳ ಅವರನ್ನು ಸತ್ಕರಿಸಲಾಯಿತು. ಅಶೋಕ ನಾಯಿಕ. ಬಸನಗೌಡ ಪಾಟೀಲ. ಸುಭಾಷ ವಂಟಗೋಡಿ ಇತರರು ಇದ್ದಾರೆ.
Published on

ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಶಾಂತವ್ವ ಬೆಳಗಲಿ, ಉಪಾಧ್ಯಕ್ಷರಾಗಿ ರಾಮಣ್ಣ ಕುರಬಚನ್ನಾಳ ಅವಿರೋಧ ಆಯ್ಕೆಯಾದರು ಎಂದು ರಿಟರ್ನಿಂಗ್ ಅಧಿಕಾರಿ ಬಿ.ಕೆ. ಗೋಖಲೆ ಪ್ರಕಟಿಸಿದರು.

ಮುಖಂಡ ಬಸನಗೌಡ ಪಾಟೀಲ ಮಾತನಾಡಿದರು. ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಅಶೋಕ ನಾಯಿಕ, ಬಸನಗೌಡ ಪಾಟೀಲ. ಸುಭಾಷ ವಂಟಗೋಡಿ. ಭೀಮಶಿ ಪೂಜೇರಿ, ಗ್ರಾಪಂ ಅಧ್ಯಕ್ಷ ತಮ್ಮಣ್ಣ ದೇವರ, ಪ್ರಶಾಂತ ವಂಟಗೋಡಿ, ಮುರಗೆಪ್ಪ ಯಕ್ಸಂಬಿ, ದತ್ತು ಕುಲಕರ್ಣಿ, ಬಸವಣೆಪ್ಪ ತಿಪ್ಪಿಮನಿ, ಜಗದೀಶ ಬೆಳಗಲಿ, ರಮೇಶ ಚನ್ನಾಳ, ಅಲ್ಲಪ್ಪ ಪರುಶೆಟ್ಟಿ, ಬಸಪ್ಪ ಯಕ್ಸಂಬಿ, ಶ್ರೀಪತಿ ಗಣಿ, ಮಾರುತಿ ಬಾಗಿಮನಿ, ಸದಾಶಿವ ಗುಡಗುಡಿ, ಕಸ್ತೂರೆವ್ವ ಕೊಪ್ಪದ, ಮಹಾದೇವ ಕೊಪ್ಪದ, ಯಮನಪ್ಪ ಸಣ್ಣಮೇತ್ರಿ, ಬಸು ಬಿಲಕುಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net