ಕುಲದಲ್ಲಿ ಕೀಳ್ಯಾವುದೋ 23ರಂದು ತೆರೆಗೆ

New PM 1 New
Published on

ಹುಬ್ಬಳ್ಳಿ : ಎಲ್ಲ ಕುಲಗಳೂ ಒಂದೇ, ಅದರಲ್ಲಿ ಬೇಧ ಭಾವ ಬೇಡ ಎಂಬ ಕಥಾಸಾರವನ್ನು ಹೊಂದಿರುವ ಕನ್ನಡ ಚಲನಚಿತ್ರ ‘ಕುಲದಲ್ಲಿ ಕೀಳ್ಯಾವುದೋ’ ಮೇ 23ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚಿತ್ರದ ನಾಯಕ ನಟ ಮಡೇನೂರು ಮನು, ಕುಟುಂಬ ಸಮೇತರಾಗಿ ನೋಡುವ ಹಾಸ್ಯ ಚಿತ್ರ ಇದು. ಪ್ರೇಕ್ಷಕರಿಗೆ ಮನೋರಂಜನೆ ನೀಡಲಿದೆ. ಚಿತ್ರದಲ್ಲಿ ಐದು ಹಾಡುಗಳಿವೆ. ರಾಮನಗರ, ಚನ್ನಪಟ್ಟಣ, ಸಕಲೇಶಪುರ ಸುತ್ತಲಿನ ಪ್ರದೇಶದಲ್ಲಿ 75 ದಿನಗಳವರೆಗೆ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.

ಯೋಗರಾಜ್ ಸಿನಿಮಾಸ್ ಅರ್ಪಿಸುವ ಪರ್ಲ್ ಸಿನಿಕ್ರಿಯೇಷನ್ಸ್ ಬ್ಯಾನರ್ ಅಡಿ ಸಂತೋಷಕುಮಾರ ಎ.ಕೆ. ಮತ್ತು ವಿದ್ಯ ಅವರು ಈ ಚಿತ್ರವನ್ನು ನಿರ್ವಿುಸಿದ್ದಾರೆ. ಕೆ. ರಾಮನಾರಾಯಣ ನಿರ್ದೇಶಿಸಿದ್ದಾರೆ. ಯೋಗರಾಜ ಭಟ್ ಮತ್ತು ಇಸ್ಲಾಂಮುದ್ದಿನ್ ಅವರ ಕಥೆಯ ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ, ಕೆ. ರಾಮನಾರಾಯಣ ಹಾಗೂ ಯೋಗರಾಜ ಭಟ್ ಅವರ ಸಾಹಿತ್ಯವಿದೆ ಎಂದು ತಿಳಿಸಿದರು.

ಮನೋಮೂರ್ತಿ ಅವರು ಸಂಗೀತ ನೀಡಿದ್ದಾರೆ. ರಾಮಾಚಾರಿ ಧಾರಾವಾಹಿ ಖ್ಯಾತಿಯ ಮೌನ ಗುಡ್ಡೆಮನೆ ನಾಯಕಿಯಾಗಿ ನಟಿಸಿದ್ದಾರೆ. ಯೋಗರಾಜ ಭಟ್, ಸೋನಾಲ್ ಮೊಂತೆರೋ, ತಬಲಾ ನಾಣಿ, ಶರತ ಲೋಹಿತಾಶ್ವ, ಡ್ರಾಗನ್ ಮಂಜು, ಜೇಡರಹಳ್ಳಿ ಕೃಷ್ಣಪ್ಪ, ಕರೀಸುಬ್ಬು, ಹರಿಶ ರಾಜು ಹಾಗೂ ಮತ್ತಿತರರು ತಾರಾಗಣದಲ್ಲಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net