ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಮೂಲಸೌಕರ್ಯ - ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಜ ಬಿ.ಎಸ್ ಆಶಯ

PTR_16 AUG_2
Published on

ವಿಟ್ಲ: ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಿದಾಗ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕುಳಾಲು ಶಾಲೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಶಾಲಾ ವಾಹನ ಒದಗಿಸಿಕೊಡಲಾಗಿದೆ ಎಂದು ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಜ ಬಿ.ಎಸ್ ಹೇಳಿದರು.

ಕುಳಾಲು ದ.ಕ. ಜಿಪಂ ಉ.ಹಿ.ಪ್ರಾ. ಶಾಲೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಕೊಡಮಾಡಲ್ಪಟ್ಟ ಶಾಲಾ ವಾಹನ ಹಸ್ತಾಂತರಿಸಿ ಮಾತನಾಡಿದರು.

ಗ್ರಾಮ ಸ್ವರಾಜ್ ಪ್ರತಿಷ್ಠಾನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮಾತನಾಡಿದರು. ಕೊಳ್ನಾಡು ಗ್ರಾಪಂ ಅಧ್ಯಕ್ಷ ಅಶ್ರಫ್ ಕೆ. ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಇಬ್ರಾಹಿಂ, ಕರ್ಣಾಟಕ ಬ್ಯಾಂಕ್ ಕುಡ್ತಮುಗೇರು ಶಾಖಾ ವ್ಯವಸ್ಥಾಪಕ ಉದಯಶಂಕರ್, ಕೊಳ್ನಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಸಂಜೀವಿ, ಭಾಗೀರಥಿ, ಹಳೇ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ಆನಂದ ಪೂಜಾರಿ ಕುಳಾಲು, ಎಸ್‌ಡಿಎಂಸಿ ಅಧ್ಯಕ್ಷ ಶರೀಫ್ ಕೆ.ಎಚ್, ಉಪಾಧ್ಯಕ್ಷ ರಮೇಶ್ ಕಾಮತ್ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಎ. ತಿಮ್ಮು ಸ್ವಾಗತಿಸಿದರು. ಸಹಶಿಕ್ಷಕ ತೌಸೀಫ್ ಆಹ್ಮದ್ ವಂದಿಸಿದರು. ಸಹಶಿಕ್ಷಕ ಪರಮೇಶ್ವರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರಾದ ಹೇಮಾ ಎಂ.ಟಿ., ಕರಿಸಿದ್ದಪ್ಪ ಕಳ್ಳೆಪ್ಪನವರ್, ಸವಿತಾ ರೈ, ಪ್ಲೇವಿಯನ್ ಡಿಸೋಜ, ಡೆಸಿನಾ ಡಿಸೋಜ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net