

ಬಾಗಲಕೋಟೆ: ತಡರಾತ್ರಿ ಘಟಪ್ರಭಾ ಎಡದಂಡೆ ಕಾಲುವೆಗೆ ಬಿದ್ದಿದ್ದ ವೃದ್ಧರೊಬ್ಬರು ಈಜಿ ದಡ ಸೇರಿರುವ ಘಟನೆ ಕುಳಲಿ ಗ್ರಾಮದಲ್ಲಿ ನಡೆದಿದೆ.
ಶಂಕರಪ್ಪ ಈಜಿ ದಡ ಸೇರಿದ ವೃದ್ದರು. ಇವರೊಂದಿಗೆ ಕಾಲುವೆಗೆ ಬಿದ್ದಿದ್ದ ಶಿವರುದ್ರಪ್ಪ ಪೋಳ ಹಾಗೂ ಪೈಗಂಬರ್ ಲಾಡಕಾನ್ ನಾಪತ್ತೆಯಾಗಿದ್ದಾರೆ. ಇವರ ಪತ್ತೆಗೆ ಶೋಧ ನಡೆಯುತ್ತಿದ್ದೆ.
ಕುಳಲಿ ಗ್ರಾಮದ ಹೊಲದಲ್ಲಿ ಭಾನುವಾರ ರಾತ್ರಿ ಕೆಲಸ ಮುಗಿಸಿ ಟ್ರ್ಯಾಕ್ಟರ್ನಲ್ಲಿ ಶಂಕರಪ್ಪ, ಶಿವರುದ್ರಪ್ಪ ಪೋಳ ಹಾಗೂ ಪೈಗಂಬರ್ ಮನೆಗೆ ತೆರಳುತ್ತಿದ್ದರು. ಟ್ರ್ಯಾಕ್ಟರ್ ಇಂಜಿನ್ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿತ್ತು.
ಮೂವರು ನೀರಿನಲ್ಲಿ ಮುಳುಗಿದ್ದರು. ಶಂಕರಪ್ಪ ಈಜಿ ದಡ ಸೇರಿದರು. ಆದರೆ ಉಳಿದ ಇಬ್ಬರು ನಾಪತ್ತೆಯಾಗಿದ್ದಾರೆ. ಕಾಲುವೆಯಲ್ಲಿದ್ದ ಟ್ರ್ಯಾಕ್ಟರ್ ಇಂಜಿನ್ ಅನ್ನು ಗ್ರಾಮಸ್ಥರು ಹೊರ ತೆಗೆದಿದ್ದಾರೆ. ಇಬ್ಬರು ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್)