

ಹೆಬ್ರಿ: ಹಿರಿಯರ ಮಾರ್ಗದರ್ಶನದ ಮೂಲಕ ಸಾಗಿದ ಸಮುದಾಯ ಪ್ರಗತಿಯತ್ತ ಸಾಗುತ್ತದೆ ಎಂದು ಬೆಳ್ತಂಗಡಿ ಶ್ರೀಕ್ಷೇತ್ರ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ದೇವಾಲಯದ ಧರ್ಮದರ್ಶಿ ರವಿ ಎನ್. ಹೇಳಿದರು.
ಶಿವಪುರದಲ್ಲಿ ಭಾನುವಾರ ಶಿವಪುರ ಕುಲಾಲ ಸಂಘದ 9ನೇ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸಂಘದ ಅಧ್ಯಕ್ಷ ಉದಯ ಹಾಂಡ ಪಾಂಡುಕಲ್ಲು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಪ್ರೋತ್ಸಾಹಧನ, ವೈದ್ಯಕೀಯ ನೆರವು ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗುತ್ತಿಗೆದಾರ ಉಪಾಧ್ಯಕ್ಷ ಕೃಷ್ಣ ಕುಲಾಲ್, ಸಾಮಾಜಿಕ ಹೋರಾಟಗಾರ ಅಣ್ಣಪ್ಪ ಕುಲಾಲ ಹೆಬ್ರಿ, ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಕಾಳು ಕುಲಾಲ್, ಸಂಘದ ಕಾರ್ಯದರ್ಶಿ ಶರತ್ ಕುಲಾಲ್, ಮಹಿಳಾ ಘಟಕ ಅಧ್ಯಕ್ಷೆ ಪೂರ್ಣಿಮಾ ಗಣೇಶ ಹಾಂಡ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿ ಸಂತೋಷ ಕುಲಾಲ್ ಸ್ವಾಗತಿಸಿದರು. ಸುನಂದಾ ಕುಲಾಲ್ ವಂದಿಸಿದರು. ಉಮೇಶ ಕುಲಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕಿ ಗೀತಾಮಂಜುನಾಥ ಕುಲಾಲ್ ಶಿವಪುರ ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ ಸೇವೆಗಾಗಿ ಬೆಳ್ತಂಗಡಿ ನಡುಬೊಟ್ಟು ಕ್ಷೇತ್ರದ ಧರ್ಮದರ್ಶಿ ರವಿ.ಎನ್., ಹಿರಿಯ ನಾಗರಿಕ ಪದ್ದು ಹಾಂಡ್ತಿ ವಾಂಟ್ಯಾಳ, ಶೈಕ್ಷಣಿಕ ಸಾಧಕರಾದ ಡಾ.ನಿಶಾ ಕುಲಾಲ್, ಸುಶ್ಮಿತಾ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.