ಕುಲಾಲ ಕುಂಬಾರ ಯುವ ಘಟಕಕ್ಕೆ ಆಯ್ಕೆ

01mdk05
Published on

ಮಡಿಕೇರಿ:

ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ಅಧ್ಯಕ್ಷರಾಗಿ ಚಂದ್ರಶೇಖರ್ ಕುಲಾಲ್ ಮೂರ್ನಾಡು ಆಯ್ಕೆ ಆಗಿದ್ದಾರೆ. ಭಾನುವಾರ ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಗೌರವ ಸಲಹೆಗಾರರಾಗಿ ಕುಶಾಲಪ್ಪ ಕುಶಾಲನಗರ, ದಾಮೋದರ ಮಡಿಕೇರಿ, ನಾರಾಯಣ ಮೂಲ್ಯ ಕುಶಾಲನಗರ, ಉಪಾಧ್ಯಕ್ಷರಾಗಿ ಅಶ್ವಥ್ ಮಡಿಕೆಬೀಡು, ಜಯಪ್ರಕಾಶ್ ಮಡಿಕೇರಿ, ಪ್ರಧಾನಕಾರ್ಯದರ್ಶಿಯಾಗಿ ಪವನ್ ಕುಲಾಲ್ ಚೇರಂಬಾಣೆ, ಜತೆ ಕಾರ್ಯದರ್ಶಿಗಳಾಗಿ ಅರುಣ್ ಕುಲಾಲ್ ಚೇರಂಬಾಣೆ, ಉದಯ್ ಕುಲಾಲ್ ಮಡಿಕೇರಿ, ಖಜಾಂಜಿಯಾಗಿ ಸುರೇಶ್ ಮಡಿಕೇರಿ, ಕ್ರೀಡಾ ಕಾರ್ಯದರ್ಶಿಯಾಗಿ
ಹರೀಶ್ ಮಡಿಕೇರಿ, ಲೋಕೇಶ್ ಆಯ್ಕೆಯಾಗಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ ಕೊಡಗು ಯುವ ಘಟಕದ ಗೌರವ ಸಲಹೆಗಾರ ಕುಶಾಲಪ್ಪ, ಯುವ ಘಟಕದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಮುಂದೆ ಯಾವ ರೀತಿ ಯುವ ಘಟಕ ಮುಂದು ವರಿಯಬೇಕೆಂದು ಸಲಹೆ ನೀಡಿದರು. ದಾಮೋದರ ಮಾತನಾಡಿ ಕುಲಾಲ ಸಂಘದ ಸ್ಥಾಪಕ ಅಧ್ಯಕ್ಷೆ ಮುತ್ತಮ್ಮ ನೀಡಿದ ಸೇವೆಯನ್ನು ನೆನಪಿಸಿದರು. ಮುಂದೆ ಯುವಕರು ಸಂಘದಲ್ಲಿ ಸಕ್ರಿಯಗೊಂಡು ಸಂಘವನ್ನು ಇನ್ನಷ್ಟು ಬಲಪಡಿಸಬೇಕು ಎಂದರು. ಕೊಡಗು ಜಿಲ್ಲಾ ಅಧ್ಯಕ್ಷ ನಾಣಯ್ಯ ಮಾತನಾಡಿ ಯುವ ಘಟಕವು ಕೊಡಗು ಜಿಲ್ಲಾ ಸಂಘಕ್ಕೆ ಪೂರಕವಾಗಿ ಕೆಲಸ ಮಾಡಲಿ ಮತ್ತು ಇದರಿಂದ ಸಂಘ ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿದೆ ಎಂದರು. ಅರುಣ್ ಕುಲಾಲ್ ಕೂಡಿಗೆ ಮಾತನಾಡಿ ಯುವಕರು ಮುಂದೆ ಬಂದಾಗ ಸಮಾಜ ಅಭಿವೃದ್ಧಿಯಾಗುತ್ತದೆ. ಜಿಲ್ಲೆಯ ಎಲ್ಲಾ ಯುವಕರು ಈ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆಗ ಸಮಾಜ ಬಾಂಧವರ ಕಣ್ಣೀರು ಒರೆಸಲು ಈ ಘಟಕವು ಪೂರಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net