ಕುಲಾಲ ಕುಂಬಾರ ಸಂಘದ ಕ್ರೀಡೋತ್ಸವ

kulala
Published on

ಮಡಿಕೇರಿ:

ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಕ್ರೀಡೋತ್ಸವ ಮತ್ತು ಸಮ್ಮಿಲನ - 2025 ಕಾರ್ಯಕ್ರಮ ಮಡಿಕೇರಿಯಲ್ಲಿ ಇತ್ತೀಚೆಗೆ ಗಣ್ಯರ ಸಮ್ಮುಖದಲ್ಲಿ ವಿಜೃಂಭಣೆಯಿAದ ನಡೆಯಿತು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ , ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಅಖಿಲ ಭಾರತೀಯ ಗ್ರಾಹಕರ ಕಲ್ಯಾಣ ಪರಿಷತ್ ರಾಜ್ಯಾಧ್ಯಕ್ಷ ಎಂ.ಪಿ. ವರ್ಷ ಮೈಸೂರು, ಮುತ್ತಮ್ಮ ಕೋಟಿ, ರೇಣುಕಾಂಬ, ಮಂಜಪ್ಪ ಶರಣರು, ಕೆ.ಎಂ. ಚಿನ್ನಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಘದ ಅಧ್ಯಕ್ಷ ಕುಶಾಲಪ್ಪ ಮೂಲ್ಯ ಮತ್ತು ಯುವ ಘಟಕದ ನಾಯಕ ಚಂದ್ರಶೇಖರ ಮೂರ್ನಾಡು, ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಉಪಾಧ್ಯಕ್ಷ ಕೆ.ಕೆ. ದಾಮೋದರ, ಕಾರ್ಯದರ್ಶಿ ಅರುಣ್ ಕುಮಾರ್, ಖಜಾಂಚಿ ಗಿರೀಶ್ ಹಾಗೂ ಮಹಿಳಾ ಘಟಕದ ಮುಂದಾಳತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಮೇಶ್ ಮಡಿಕೆಬೀಡು, ನವೀನ್ ಕುಲಾಲ್ ಪುತ್ತೂರು, ಹೇಮಾ ಪ್ರಕಾಶ್ ಬೆಟಗೇರಿ, ಪವನ್, ಶಾಂತಕುಮಾರ್ ಮತತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net