ಆಹಾರ ನೀಡಿ ಮಾನವೀಯತೆ ಮೆರೆದ ಯುವ ತಂಡ

28032020 Kukanoor youth food supply
Published on

ಕುಕನೂರು: ಕರೊನಾ ಭೀತಿ ಹಿನ್ನಲೆ ಅಂಗಡಿ, ಹೋಟೆಲ್‌ಗಳು ಬಂದಾಗಿದ್ದು, ಕುಕನೂರಿನ ಯುವಕರ ತಂಡವೊಂದು ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಭಿಕ್ಷುಕರು, ವೃದ್ಧರು ಹಾಗೂ ಪೌರ ಕಾರ್ಮಿಕರಿಗೆ ಆಹಾರ ಪೊಟ್ಟಣ ನೀಡಿ ಮಾನವೀಯತೆ ಮೆರೆಯುತ್ತಿದೆ.

ನಿತ್ಯ ಸಾರ್ವಜನಿಕರ ಹಿತಕ್ಕೆ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿ, ಅಧಿಕಾರಿ ವರ್ಗಕ್ಕೆ ಹಾಗು ಪಟ್ಟಣದ ಪೌರ ಕಾರ್ಮಿಕರ ಕೆಲಸದ ಸ್ಥಳಕ್ಕೆ ಹೋಗಿ ಆಹಾರ ನೀಡುತ್ತಾರೆ. ರೋಗಿಗಳು, ವೃದ್ಧಾಶ್ರಮದ ವೃದ್ಧರು, ಭೀಕ್ಷುಕರಿಗೆ ಆಹಾರ ನೀಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. 8 ರಿಂದ 10 ಜನ ಇರುವ ಈ ತಂಡದಲ್ಲಿ ಸ್ವತಃ ತಾವೇ ಹಣ ಭರಿಸಿ ಗುಣಮಟ್ಟದ ಆಹಾರ ತಯಾರಿಸಿ ವಿತರಿಸುತ್ತಿದ್ದಾರೆ. ಯುವಕ ಲಕ್ಷ್ಮಣ ಕಾಳಿ ಮುಂದಾಳತ್ವದ ಈ ತಂಡ ಕಳೆದ ಎರಡು ದಿನದಿಂದ ಈ ಕಾರ್ಯಕ್ಕೆ ಮುಂದಾಗಿದೆ.

ಸಂಪರ್ಕಿಸಬಹುದು: ಕುಕನೂರು ಸುತ್ತಲೂ ಹಸಿವಿನಿಂದ ಯಾರಾದರೂ ಬಳಲುತ್ತಿದ್ದರೆ ಇಲ್ಲವೆ, ಯಾರಿಗಾದರೂ ಆಹಾರ ತಲುಪಿಸುವುದಿದ್ದರೆ ತಂಡದ ಲಕ್ಷ್ಮಣ ಕಾಳಿ 9741656137, ಬಸವರಾಜ ಉಮಚಗಿ 9739249744 ಸಂಪರ್ಕಿಸಬಹುದು. ಆಹಾರ ವಿತರಿಸುವವರು ಈ ಯುವಕರ ತಂಡ ಸಂಪರ್ಕಿಸಿ ಅಕ್ಕಿ ಹಾಗೂ ಇತರ ಸಾಮಗ್ರಿ ನೀಡಿದರೆ ಈ ತಂಡ ಆಹಾರ ತಯಾರಿಸಿ ವಿತರಣೆಗೆ ಮುಂದಾಗಲಿದೆ.

ಲಕ್ಷ್ಮಣ ಕಾಳಿ ಮುಂದಾಳತ್ವದ ತಂಡ ಕುಕನೂರಲ್ಲಿ ಎಲ್ಲ ಇಲಾಖೆಗೆ ಆಹಾರ ನೀಡುತ್ತಿದೆ. ಕರೊನಾ ಭೀತಿ ಹಿನ್ನಲೆ ಎಲ್ಲ ಹೋಟೆಲ್‌ಗಳು ಬಂದ್ ಆಗಿದ್ದು, ರೋಗಿಗಳು, ಭಿಕ್ಷಕರು, ನಿರ್ಗತಿಕರು ತೊಂದರೆ ಅನುಭವಿಸುವಂತಾಗಿತ್ತು. ಈ ಯುವಕರ ತಂಡ ಮಾದರಿಯಾಗಿದೆ.| ಕಿರಣಕುಮಾರ ಕುಲಕರ್ಣಿ, ತಹಸೀಲ್ದಾರ್, ಎನ್.ವೆಂಕಟೇಶ, ಪಿಎಸ್‌ಐ ಕುಕನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net