

ಕುಕನೂರು: ಎಸ್ಟಿ ವರ್ಗಕ್ಕೆ ಅನ್ಯ ಜಾತಿಗಳ್ನು ಸೇರಿದಂತೆ ಮತ್ತು ನಕಲಿ ಪ್ರಮಾಣ ಪತ್ರಗಳನ್ನು ನೀಡದಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಹಸೀಲ್ದಾರ್ ಎಚ್.ಪ್ರಾಣೇಶಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಸಮಾಜದ ತಾಲೂಕಾಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ 52 ಜಾತಿ-ಉಪ ಜಾತಿಗಳಿವೆ ಆದರೂ ಅನ್ಯ ಜಾತಿಗಳಾದ ಕುರುಬ ಸಮುದಾನವನ್ನು ಸೇರಿಸುವ ಹುನ್ನಾರನ್ನು ಸಿಎಂ ಸಿದ್ದರಾಮಯ್ಯ ನಡೆಸಿದ್ದಾರೆ.
ಈ ಕ್ರಮದಿಂದ ರಾಜ್ಯದ ವಾಲ್ಮೀಕಿ ಸಮುದಾಯಕ್ಕೆ ನೋವುಂಟಾಗಿದೆ. ಮೊದಲು ಎಸ್ಟಿ ಸಮುದಾಯಕ್ಕೆ ಇದ್ದ ಶೇ.3 ಮೀಸಲನ್ನು ರಾಜನಹಳ್ಳಿಯ ವಾಲ್ಮೀಕಿ ಶ್ರೀಗಳ ನೇತೃತ್ವದಲ್ಲಿ 284 ದಿನಗಳಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡಸಿದ ಫಲವಾಗಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಶೇ.7 ಮೀಸಲು ನೀಡಿದ್ದರು. ಇದನ್ನು ಮನಗಂಡು ಕೇಲವು ಸಮುದಾಯ ನಾಯಕರು ನಮ್ಮ ಎಸ್ಟಿ ಸಮುದಾಯಕ್ಕೆ ಬರಲು ಕುತಂತ್ರ ನಡೆಸಿದ್ದಾರೆ. ಇದೇನಾದರು ಮುಂದುವರಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಗೌರವಧ್ಯಕ್ಷ ಹಂಚಾಳಪ್ಪ ತಳವಾರ, ಪ್ರಧಾನ ಕಾರ್ಯದರ್ಶಿ ಸುಭಾಷ್‌ಚಂದ್ರ, ಪ್ರಮುಖರಾದ ಸಂಜೀವಪ್ಪ ಸಂಗಟಿ, ಮಂಗಳೇಶ ಮಂಗಳೂರು, ಕನಕಪ್ಪ ಬ್ಯಾಡರ್, ದ್ಯಾಮಣ್ಣ ಉಚ್ಚಲಕುಂಟಾ, ಹೇಮಣ್ಣ ಅಂಗಡಿ, ರಾಮಣ್ಣ ಯಡ್ಡೋಣಿ, ರಾಮಣ್ಣ ಮುಂದಲಮನಿ, ಹನುಮಪ್ಪ ಮರಡಿ, ಭರಮಪ್ಪ ತಳವಾರ, ಕನಕರಾಯ ನಿಂಗಾಪೂರ, ಸಿದ್ದಪ್ಪ ಗಾವರಾಳ, ಪ್ರಕಾಶ ತಹಸೀಲ್ದಾರ್, ಸಿದ್ದು ವಾಲ್ಮೀಕಿ ಇತರರಿದ್ದರು.