

ಕುಕನೂರು: ದೇಶ ಮತ್ತು ರಾಜ್ಯವನ್ನು ಆಳುವಂತಹ ಸರ್ಕಾರಗಳನ್ನು ಎಚ್ಚರಿಸುವುದಕ್ಕಾಗಿ ರೈತ ಸಂಘನೆಗಳು ಹಗಲು ರಾತ್ರಿ ಎನ್ನದೆ ಹೋರಾಟಗಳನ್ನು ಮಾಡುತ್ತಿವೆ ಎಂದು ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಈಶಪ್ಪ ಸಬರದ ಹೇಳಿದರು.
ಪಟ್ಟಣದ ಮಸಬಹಂಚಿನಾಳ ಗ್ರಾಮದ ಬೈಪಾಸ್ ರಸ್ತೆ ಪಕ್ಕದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಾಮಫಲಕ ಅನಾವರಣಗೊಳಿಸಿ ಮಂಗಳವಾರ ಮಾತನಾಡಿದರು.
ರೈತರು ಸಂಘಟಿತರಾಗಬೇಕು. ಅಂದಾಗ ನಮ್ಮ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತದೆ. ನಮ್ಮ ಪಟ್ಟಣದಲ್ಲಿ ರೈತ ಸಂಘಟನೆ ವೃತ್ತವಿಲ್ಲ. ಇದರಿಂದ ರಾಷ್ಟ್ರೀಯ ಹೆದ್ದಾರಿ ಕೂಡುವ ಪ್ರದೇಶದಲ್ಲಿ ಸಂಘಟನೆ ವೃತ್ತ ಮಾಡಲಾಗಿದೆ ಎಂದರು.
ತಾಲೂಕಾಧ್ಯಕ್ಷ ದೇವಪ್ಪ ಸೋಬಾನದ, ನಗರ ಘಟಕದ ಅಧ್ಯಕ್ಷ ಶಿವು ಬಂಗಿ, ಸಹಕಾರ ಸಂಘದ ಸದಸ್ಯರಾದ ಬಸಪ್ಪ ಈಬೇರಿ, ಕಳಕಪ್ಪ ಕುಂಬಾರ, ಮುಖಂಡರಾದ ಬಸವರಾಜ ಬಿನ್ನಾಳ, ಬಸವರಾಜ ಸಬರದ, ಖಾಸೀಮ್‌ಅಲಿ ಸಂಗಟಿ, ರುದ್ರಪ್ಪ ಕುಡ್ಲೂರು, ಈರಪ್ಪ ಕುಡ್ಲೂರು, ಮೇಘರಾಜ ಜಿಡಗಿ, ಮಂಜುನಾಥ, ಹನುಮಂತ ಗೊರ್ಲೆಕೊಪ್ಪ, ಬಸಪ್ಪ ಮಂಡಲಗೇರಿ, ಹನುಮಪ್ಪ ಮರಡಿ ಇತರರಿದ್ದರು.