

ಪಳೆಯಂಡ ಪಾರ್ಥಚಿಣ್ಣಪ್ಪ ವಿರಾಜಪೇಟೆ
ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕುಕ್ಲೂರು ಗ್ರಾಮ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ.
ಕಾಡಾನೆ ಹಾಗು ವನ್ಯ ಜೀವಿಗಳ ಹಾವಳಿ, ಕೊಳಚೆ ಕುಡಿಯುವ ನೀರು, ಪ್ಲಾಸ್ಟಿಕ್ ಹೊದಿಕೆಯ ಮನೆ, ಮುಖ್ಯ ರಸ್ತೆ ಹೊರತು ಪಡಿಸಿ ಗ್ರಾಮದ ಇತರ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅಗ್ಗಿಂದಾಗೆ ವಿದ್ಯುತ್ ಅಡಚಣೆ, ಕಾಡು ಬಿದ್ದಿರುವ ಊರು ಮಂದ್, ಪಳವಳಿಕೆಯಾಗಿ ಉಳಿದುಕೊಂಡ ಅಂಬೇಡ್ಕರ್ ಭವನ ಇದು ರಾಜ್ಯದ ನಂ೧ ಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಗ್ರಾಮ ಸಂಚಾರದಲ್ಲಿ ಕಂಡು ಬಂದ ಚಿತ್ರಣ.
ಪರಿಶಿಷ್ಟ ಜಾತಿ ಕಾಲೂನಿಯಲ್ಲಿ ಅಂಗನವಾಡಿಗೆ ತೆರಳಲು ಸೂಕ್ತ ರಸ್ತೆ ಸಂಪರ್ಕ ಇಲ್ಲ. ಅಯ್ಯಪ್ಪ ದೇವರ ಸ್ನಾನದ ಕೊಳ ಅಭಿವೃದ್ದಿ ಕಾಣದೆ ಹಾಗೆಯೆ ಉಳಿದುಕೊಂಡಿದೆ. ಕೆರೆಗೆ ೮೦ ಸಾವಿರ ಹಣ ವಿನಿಯೋಗಿಸಲಾಗಿದೆ ಎಂದು ನಮೂದಿಸಲಾಗಿದೆ. ೬೦ ಸಾವಿರ ವೆಚ್ಚದಲ್ಲಿ ೮*೮ ಅಳತೆಯ ಶೌಚಗೃಹದ ಮಾದರಿ ಮನೆ ನಿರ್ಮಿಸಿಕೊಡಲಾಗಿದೆ. ಗೋಪಿ ಎಂಬವರ ಮನೆ ಬಿದ್ದು ೧೫ ವರ್ಷ ಕಳೆದರು ಈವರೆಗು ಪಾಸ್ಲಿಕ್ ಹೊದಿಕೆಯೆ ಅವರ ಮನೆಯಾಗಿದೆ.
ಕುಂದ್‌ರ ಅಡಿ ಊರ್; ಹಿಂದೆ ರಾಜರ ಕಾಲದಲ್ಲಿ ಎಲ್ಲಾ ಊರುಗಳಿಗೆ ಹೆಸರುಗಳು ಕೊಡುವ ಸಂದರ್ಭ ಮಲೆತೆರಿಕೆ ಬೆಟ್ಟದ ಕೆಳ ಭಾಗದಲ್ಲಿರುವುದರಿಂದ ಕುಂದ್‌ರ ಅಡಿರ ಊರ್ ಎಂದು ನಾಮಕರಣ ಮಾಡಲಾಯಿತು. ದಿನಕಳೆದಂತೆ ಕುಕ್ಲೂರು ಆಗಿದೆ. ಗ್ರಾಮದಲ್ಲಿ ಅಂದಾಜು ೮೦೦ ಹೆಚ್ಚು ಜನಸಂಖ್ಯೆ ಹೊಂದಿದ್ದು, ೭೦೦ ಮತದಾರರಿದ್ದಾರೆ. ಚಂಬೆಬೆಳ್ಳೂರಿನಿಂದ ಮಗ್ಗುಲ ಗಡಿ, ಐಮಂಗಲ, ಕದನೂರು ಬೆಳ್ಳರಿಮಾಡು ಆರ್ಜಿ, ಬೇಟೋಳಿ ಗಡಿಭಾಗದವರೆಗೆ ಅಂದಾಜು ೮ ಕಿ.ಮಿ ವಿಸ್ತರಿಸಿಕೊಂಡಿದೆ.
ಕುಕ್ಲೂರು ಗ್ರಾಮ ವಿರಾಜಪೇಟೆ ಪಟ್ಟಣಕ್ಕೆ ಹೊಂದಿಕೊಂಡಿದ್ದು ಕುಕ್ಲೂರು ಗ್ರಾಮದಲ್ಲಿದ್ದ ಪುದುಕೋಟೆಯ ಕೆವು ಭಾಗ, ಕದನೂರು ಮುಖ್ಯ ರಸ್ತೆಯ ಬಳಿ ಇರುವ ವಾಹನ ತೂಕದ ಯಂತ್ರವರೆಗೆ ಶೇ ೮೦ ರಷ್ಟು ಪುರಸಭೆ ವ್ಯಾಪ್ತಿ ಸೇರ್ಪಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ದೇವಾಲಯಗಳು: ಕುಂದತ್ ಮೂಲ ಭದ್ರಕಾಳಿ, ಅಯ್ಯಪ್ಪ, ಅಮ್ಮಯ್ಯ ದೇವಾಲಯ, ಟಿಪ್ಪುವಿನ ಕಾಲದಲ್ಲಿ ಭಗ್ನಗೊಂಡ ಅಯ್ಯಪ್ಪ, ಅಜ್ಜಪ್ಪ, ಗುರುಕಾರಣ ಮತ್ತಪ್ಪ ದೇವಾಲಯಗಳಿದೆ. ಭದ್ರಕಾಳಿ ದೇವರ ವಾರ್ಷಿಕ ಬೇಡು ಹಬ್ಬ ಮೇ ತೀಂಗಳಲ್ಲಿ ನಡೆಲಿದೆ. ಕ್ಷೇತ್ರ ಶೀಕ್ಷಣಾಧಿಕಾರಿಗಳ ಕಚೇರಿ, ಸರ್ಕಾರಿ ಜೂನಿಯರ್ ಕಾಲೇಜು, ಸರ್ಕಾರಿ ಹಿರಿಯ ಪ್ರಾಥಮಿಕ ಹಾಗು ಜೆಪಿಎಸ್ ಶಾಲೆ ಅಂಗನವಾಡಿ, ಕೊಡವ ಸಮಾಜ, ಕೊಡವ ಸಮಾಜದ ತ್ರೀವೇಣಿ ಶಾಲೆ, ಕಾವೇರಿ ಶಾಲೆ, ಕೊಡವ ಸಮಾಜದ ಸ್ಪೋಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಕುಕ್ಲೂರು ಗ್ರಾಮದಲ್ಲಿದೆ.
ಸಾಧಕರು: ತಾತಂಡ ಪ್ರಭಾ ನಾಣಯ್ಯ ಕಿರುತೆರೆ ನಟಿ, ತಾತಂಡ ಪ್ರತಾಪ್, ಸಂಗೀತ ನಿರ್ದೇಶಕ, ಕರ್ನಂಡ ಸೋಮಣ್ಣ ಅಂತರಾಷ್ಟ್ರೀಯ ಕರಾಟೆ ತೀರ್ಪುಗಾರ, ಮಾಳೇಟಿರ ಶ್ರೀನಿವಾಸ್ ವಿಕ್ಷಕ ವಿವರಣೆಗಾರ, ಮಾಳೇಟಿರ ಜಗತ್ ನಂಜಪ್ಪ ಅಂತರಾಷ್ಟ್ರೀಯ ರ‌್ಯಾಲಿ ಪಟು, ಮಾಳೇಟಿರ ದ್ಯಾನ್ ಚಿಣ್ಣಪ್ಪ ಅಡ್ವಕೇಟ್ ಜನರಲ್, ಮಾಳೇಟಿರ ಅಮರ್ ಅಮೇರಿಕದ ಪ್ರತಿಷ್ಠಿತ ಕಂಪನಿಯ ಸಿ.ಇ.ಒ, ಮಾಳೇಟಿರ ಸುಭಾಶ್ ನಾಣಯ್ಯ ಮೈಸೂರು ಮಹಾ ನಗರ ಪಾಲಿಕ ಸದಸ್ಯ, ಮಂಡುಡ ಕಾರ್ಯಪ್ಪ ಪ್ರಥಮ ಫ್ಯಾಷನ್ ಡಿಸೈನರ್ ಕಾಲೇಜಿನ ಸಿ.ಇ.ಒ, ಬೆಲ್ಲಿಕುಟ್ಟಡ ದಿನೇಶ್ ಕೊಡಗು ವಿದ್ಯಾಲಯದ ಫಿಸಿಕಲ್ ಡೈರೆಕ್ಟರ್, ಮಾಳೇಟಿರ ಚಿಣ್ಣಪ್ಪ ನಿವೃತ ಕರ್ನಲ್.
ಕುಟುಂಬಗಳು; ಮಾಳೇಟಿರ, ತಾತಂಡ, ಮೊಣ್ಣಂಡ, ಕರ್ನಂಡ, ಕುಟ್ಟಂಡ, ಮಂಡುಡ ಬಡಕಡ, ಮಂಡೇಪಂಡ,(ಕೊಡವ), ಬೆಲ್ಲಿಕುಟ್ಟಡ, ನೆಲ್ಲಿಕುಟ್ಟಡ, ಸನ್ನಿಕುಟ್ಟಡ, ಕೇರಿಕುಟ್ಟಡ (ಕೆಂಬಟ್ಟಿ ಜನಾಂಗ), ಮಲೆಯಾಳಿ, ಕೊಂಕಣಿ, ಜನಾಂದದವರಿದ್ದಾರೆ. ತಾತಂಡ ಕುಟುಂಬ ಕೌಟುಂಬಿಕ ಹಾಕಿ, ರಿಂಕ್ ಹಾಕಿ, ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಿದ ಹೆಗ್ಗಳಿಗೆ ಪಾತ್ರರಾಗಿಗಾರೆ. ಬಾರಿಯ ಕೌಟುಂಬಿಕ ಕ್ರಿಕೆಟ್ ಪಂದ್ಯಾಟ ನಡೆಸಿದ್ದರು.
ವಿಶೇಷತೆ: ಆರಾಯಿರ ನಾಡು ಪೂಮಾಲೆ ಮಂದ್ ಇದ್ದು ಹುತ್ತರಿ ಹಬ್ಬ ಕಳೆದ ನಂತರ ಆರಾಯಿರ ನಾಡಿನ ಜನರು ಸೇರಿ ವಾಲಗ ಕೊಂಬುಕೊಟ್ಟಿನೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಕೊಡವರ ಕೋಲಾಟ, ಪರೆಯ ಕಳಿ, ಸಾಮೂಹಿಕ ವಾಲಗದ ಕುಣಿತ ನಡೆಸುವುದು ವಿಷೇಷತೆಯಾಗಿದೆ.
ರಾಜಕೀಯ: ತಾತಂಡ ಕಬೀರ್ ಗಣಪತಿ, ತಾತಂಡ ಬಿಪಿನ್, ಮಾಳೇಟಿರ ಕಾಳಯ್ಯ ರಾಜಕೀಯದಲ್ಲಿ ಗುರುತಿಸಿ ಕೊಂಡಿದ್ದಾರೆ. ಮಂಡೇಪಂಡ ಚಿಟ್ಟಿಯಪ್ಪ, ಎಚ್.ಟಿ ಲಲಿತ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ.
ಅನಾಧಿ ಕಾಲದಲ್ಲಿ ಸ್ಮಾಶನಕ್ಕೆ ಜಾಗ ಕೊಟ್ಟವರು ಬೇಲಿ ಹಾಕಿದರು. ಮತ್ತೊಬ್ಬರು ೧೦ ಸೆಂಟ್ ಜಾಗ ನೀಡಿದರು. ವಿಷೇಶತೆ ಎಂದರೆ ಒಂದೆ ಕುಟುಂಬದ ಇಬ್ಬರು ಮಾಜಿ ಗ್ರಾ.ಪಂ ಸದಸ್ಯರು. ದ.ಸಂ.ಸ ಸಂಘಟನೆಯ ಹೋರಾಟದಿಂದ ಸ್ಮಾಶಕ್ಕೆ ೨೭ ಲಕ್ಷ ಸರ್ಕಾರಿಂದ ಮುಂಜೂರಾಗಿದ್ದು ಶೀಘ್ರದಲ್ಲಿಯೆ ವಿದ್ಯುತ್ ಚಿತಗಾರ ನಿರ್ಮಿಸಲಾಗುವುದು.ಎಚ್.ಎ.ಸತೀಶ್ ಕುಮಾರ್, ಗ್ರಾಮಸ್ಥರುಕಾಲೂನಿಯಲ್ಲಿರುವ ಜನರು ಕಲುಷಿತ ನೀರನ್ನು ಕುಡಿಯುತ್ತಿದ್ದಾರೆ. ಹರಿಜನ ಕಾಲೂನಿಗೆ ನೀಡ ಬೇಕಾದ ನೀರಿನ ಸಂಪರ್ಕವನ್ನು ಪ್ರಭಾವಿ ವ್ಯಕ್ತಿಗಳು ತಮ್ಮ ಲೈನ್ ಮನೆಗೆ ಹಾಕಿಸಿಕೊಂಡಿದ್ದಾರೆ. ಜಿ.ಪಂ ನಿಂದ ೨ ಟ್ಯಾಂಕ್ ನಿರ್ಮಾಣ ಮಾಡಿದರು ಕಾಲೂನಿಗೆ ನೀರಿನ ಸೌಲಭ್ಯ ಲಭಿಸುತ್ತಿಲ್ಲ.ಮಾಳೇಟಿರ ಕಾಳಯ್ಯ, ಗ್ರಾಮಸ್ಥರುಜನ ಪ್ರತಿನಿಧಿಗಳು ಊರಿನ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲದ ಕಾರಣ ಗ್ರಾಮ ಕುಗ್ರಾಮವಾಗಿ ಉಳಿದುಕೊಂಡಿದೆ. ಶಾಸಕರ ನಿದಿಯಿಂದ ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಕಂಡರು, ಕಾಡಾನೆ ಹಾಗು ವನ್ಯಜೀವಿಗಳ ಉಪಟಳದಿಂದ ಗ್ರಾಮಸ್ಥರು ಕೃಷಿಯತ್ತ ಒಲವು ತೋರುತ್ತಿಲ್ಲ. ಅರಣ್ಯ ಇಲಾಖೆಗೆ ದೂರು ನೀಡಿದರೆ ನಿರ್ಲಕ್ಷ್ಯದಿಂದ ಕಾಣುತ್ತಾರೆ.ಮಾಳೇಟಿರ ಶ್ರೀನಿವಾಸ್, ಗ್ರಾಮಸ್ಥರುಅಭಿವೃದ್ಧಿ ಕಾರ್ಯಕ್ಕೆ ನಿರೀಕ್ಷತ ಮಟ್ಟದಲ್ಲಿ ಅನುದಾನ ಬರುತ್ತಿಲ್ಲ. ಬರುವ ಅಲ್ಪ ಅನುದಾನದಲ್ಲಿ ಕುಡಿಯುವ ನೀರು ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಬೆಟ್ಟ ಪ್ರದೇಶದ ಕಳೆಭಾಗದಲ್ಲಿ ಕಾಲೂನಿ ಇರುವ ಕಾರಣ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುವುದರಿಂದ ತುಂಬಾ ತೊಂದರೆ ಅನುಭವಿಸುತ್ತಾರೆ. ಅವರ ಪರಿಸ್ಥಿತಿ ಶೋಚನೀಯ.ಮಂಡೇಪಂಡ ಚಿಟ್ಟಿಯಪ್ಪ, ಸದಸ್ಯರು, ಚಂಬೆಬೆಳ್ಳೂರು ಗ್ರಾ.ಪಂ