ಮಠ-ಮಂದಿರಗಳಿಂದ ಧರ್ಮ ಪ್ರಚಾರ : ಡಾ.ವಿನ್ಯಾಸ್ ಹೊಸೋಳಿಕೆ ಅಭಿಮತ

sanmana
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಶ್ರೀ ಕೃಷ್ಣ ಜನ್ಮಾಷ್ಟಮಿ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ ಸಾಮಾಜಿಕ ಆಚರಣೆಯೂ ಆಗಿದೆ. ಮಠ-ಮಂದಿರಗಳು ಸೂರ್ಯನಂತೆ ಧರ್ಮ ಪ್ರಚಾರ ತೊಡಗಿಕೊಂಡಿವೆ ಎಂದು ಕೆ.ಎಸ್.ಎಸ್ ಕಾಲೇಜಿನ ಉಪನ್ಯಾಸಕ ಡಾ.ವಿನ್ಯಾಸ್ ಹೊಸೊಳಿಕೆ ಹೇಳಿದರು.

ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಕೃಷ್ಣಜನ್ಮಾಷ್ಠಮಿ ಉತ್ಸವ ಸಮಿತಿ ವತಿಯಿಂದ ಸುಬ್ರಹ್ಮಣ್ಯದಲ್ಲಿ ಇಪ್ಪತ್ತನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಮತ್ತು ಸಾಂಪ್ರದಾಯಿಕ ಅಟ್ಟಿ ಮಡಕೆಯ ಸಮಾರೋಪ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಉತ್ಸವ ಸಮಿತಿ ಅಧ್ಯಕ್ಷ ದೀಪಕ್ ಎಚ್.ಬಿ.ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸುಬ್ರಹ್ಮಣ್ಯ ಆರಕ್ಷಕ ಠಾಣಾ ಉಪನಿರೀಕ್ಷಕ ಕಾರ್ತಿಕ್ ಕೆ.ಬಹುಮಾನ ವಿತರಿಸಿದರು. ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಎನ್.ಎಸ್., ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್, ಜೇಸಿ ಸೀನಿಯರ್ ಚೇಂಬರ್ ಅಧ್ಯಕ್ಷ ಡಾ.ರವಿ ಕಕ್ಕೆಪದವು, ಕುಕ್ಕೆಶ್ರೀ ಆಟೋ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ಮಹೇಶ್ ಗುಡ್ಡೆಮನೆ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ್ ನಡುತೋಟ, ಮಾಜಿ ತಾ.ಪಂ.ಸದಸ್ಯೆ ವಿಮಲಾ ರಂಗಯ್ಯ ಮುಖ್ಯ ಅತಿಥಿಗಳಾಗಿದ್ದರು. ಸಮಿತಿ ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್., ಕಾರ್ಯದರ್ಶಿ ಸುಕೇಶ್ ಸುಧಿ, ಸಂಚಾಲಕ ವೆಂಕಟೇಶ್ ಎಚ್.ಎಲ್., ಪೂರ್ವಾಧ್ಯಕ್ಷ ಡಾ.ಸಿದ್ಧಲಿಂಗ ಎಸ್.ಎಸ್.ಇದ್ದರು.

ಸಾಧಕರಿಗೆ ಗೌರವಾರ್ಪಣೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟಕ್ಕೆ 6ನೇ ರ‌್ಯಾಂಕ್ ಪಡೆದ ವರ್ಷ ಬೇಕಲ್, ಪಿಯುಸಿ ಪರೀಕ್ಷೆಯಲ್ಲಿ 4ನೇ ರ‌್ಯಾಂಕ್ ಪಡೆದ ದಿಶಾ ಎಸ್., ಪಿಯುಸಿ ವಿಭಾಗದಲ್ಲಿ 5ನೇ ರ‌್ಯಾಂಕ್ ಪಡೆದ ದುರ್ಗಾಲಕ್ಷ್ಮೀ, ಬಿಬಿಎ ಪರೀಕ್ಷೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ 6ನೇ ರ‌್ಯಾಂಕ್ ಪಡೆದ ಸಿಂಧೂರ, ಬಿಕಾಂ ಪರೀಕ್ಷೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ 10ನೇ ರ‌್ಯಾಂಕ್ ಪಡೆದ ಶ್ರಾವ್ಯ ಮುತ್ಲಾಜೆ, ವಾಣಿಜ್ಯ ವಿಭಾಗದಲ್ಲಿ 8ನೇ ರ‌್ಯಾಂಕ್ ಪಡೆದ ದಿಶಾ ಎಸ್. ಹಾಗೂ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪುರಸ್ಕೃತ ಸುಂದರ ಕೆಜಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿವೃತ್ತ ನೌಕರ ಈಶ್ವರ ಗೌಡ ಅವರನ್ನು ಸನ್ಮಾನಿಸಲಾಯಿತು. ಟೀಮ್ ಕುಕ್ಕೆ ಮೆಟ್ಸ್ ಲೋಗೋ ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net