

ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ವತಿಯಿಂದ 54ನೇ ವರ್ಷದ ಗಣೇಶೋತ್ಸವ ವಿವಿಧ ವೈಧಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ರಾತ್ರಿ ಪುಣ್ಯನದಿ ಕುಮಾರಧಾರಾದಲ್ಲಿ ಪುರೋಹಿತರು ವೈಧಿಕ ವಿಧಿವಿಧಾನ ನೆರವೇರಿಸಿದ ಬಳಿಕ ಶ್ರೀ ದೇವರ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಯಿತು.
ಶ್ರೀ ಗಣಪತಿ ಶೋಭಾಯಾತ್ರೆ ಶ್ರೀ ದೇವಳದ ರಥಬೀದಿಯಿಂದ ಸಂಜೆ ಆರಂಭಗೊಂಡಿತು. ಸಪ್ತಾಶ್ವದ ಬೆಳ್ಳಿ ರಥದಲ್ಲಿ ಶ್ರೀ ಗಣಪತಿಯ ಶೋಭಾಯಾತ್ರೆ ನೆರವೇರಿತು. ಹಲವು ಸ್ತಬ್ಧಚಿತ್ರಗಳು ಭಾಗವಹಿಸಿ ಮೆರವಣಿಗೆ ಮೆರುಗು ಹೆಚ್ಚಿಸಿದವು. ಶ್ರೀ ಸದಾನಂದ ಆಚಾರ್ಯ ಕಾಣಿಯೂರು ಮಾರ್ಗದರ್ಶನದ ಕುಣಿತ ಭಜನಾ ತಂಡ ಮತ್ತು ಎಬಿವಿಪಿ ಸ್ವಯಂಸೇವಕರ ಕುಣಿತ ಭಜನಾ ತಂಡದಿಂದ ಭಜನೆ ನಡೆಯಿತು.. ಕಪಿಲ ಚೆಂಡೆ ಬಳಗದಿಂದ ಮತ್ತು ಶರತ್ ಅಮ್ಮಣ್ಣಾಯ ನೇತೃತ್ವದಲ್ಲಿ ಸಿಂಗಾರಿ ಮೇಳ, ಕುಕ್ಕೆಮೇಟ್ಸ್ ತಂಡದಿಂದ ಆಯೋಜಿಸಲ್ಪಟ್ಟ ಡಿಜೆ ಮೇಳ, ನಾಸಿಕ್ ಬ್ಯಾಂಡ್ ಮೇಳವೂ ಮೆರವಣಿಗೆಯಲ್ಲಿತ್ತು. ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್.ಕೆ ನೇತೃತ್ವದಲ್ಲಿ ಶಾಂತಿ ಸುವ್ಯವಸ್ಥೆ ವ್ಯವಸ್ಥಿತವಾಗಿ ಸುಬ್ರಹ್ಮಣ್ಯ ಪೊಲೀಸರು ಕಾಪಾಡಿದ್ದರು.
ಸಮಿತಿ ಅಧ್ಯಕ್ಷ ದಿನೇಶ್ ಮೊಗ್ರ, ಸಂಚಾಲಕರಾದ ಎ.ವೆಂಕಟ್ರಾಜ್, ಕೆ.ಯಜ್ಞೇಶ್ ಆಚಾರ್, ರಾಜೇಶ್ ಎನ್.ಎಸ್., ನಿಕಟಪೂರ್ವಾಧ್ಯಕ್ಷ ದಿನೇಶ್ ಸಂಪ್ಯಾಡಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ, ಕಾರ್ಯದರ್ಶಿ ದೀಪಕ್ ನಂಬಿಯಾರ್, ಉಪಾಧ್ಯಕ್ಷರಾದ ಯಶೋಧಕೃಷ್ಣ ನೂಚಿಲ, ವಿನ್ಯಾಸ್ ಹೊಸೋಳಿಕೆ, ಭರತ್ ನೆಕ್ರಾಜೆ, ನಿತಿನ್ ಭಟ್, ಮಹೇಶ್ ಗುಡ್ಡೆಮನೆ, ಭಾರತಿ ದಿನೇಶ್, ಪ್ರಧಾನ ಕೋಶಾಧಿಕಾರಿ ಶ್ರೀಕೃಷ್ಣ ಶರ್ಮ, ಕೋಶಾಧಿಕಾರಿ ಹರಿಪ್ರಸಾದ್ ನಾಯರ್ ಮಲ್ಲಾಜೆ, ಜತೆ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಎಸ್., ಜಯರಾಮ ಎಚ್.ಎಲ್., ಸಹಕೋಶಾಧಿಕಾರಿಗಳಾದ ಅಚ್ಚುತ್ತ ಗೌಡ, ಶ್ರೀಕುಮಾರ್ ಬಿಲದ್ವಾರ, ಸುಹಾಸ್ ಎಚ್.ಎಸ್., ದೇವಿ ಚರಣ್ ಕಾನಡ್ಕ ಭಾಗವಹಿಸಿದ್ದರು.